ಗದಗ ಅಗಸ್ಟ ೨ : ಸಧೃಢ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ಅರ್ಹ ಮತದಾರರನು ಮತ ಚಲಾಯಿಸುವದು ಅತೀ ಅವಶ್ಯಕವಾಗಿದೆ. ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವದರಲ್ಲಿ ಬಿ.ಎಲ್.ಓ.ಗಳ ಪಾತ್ರ ಅತೀ ಪ್ರಮುಖವಾಗಿದೆ. ಈ ಮಹತ್ವದ ಕಾರ್ಯಕ್ಕೆ ಬಿ.ಎಲ್.ಓ.ಗಳಾಗಿ ಹೊಸದಾಗಿ ನೇಮಕವಾದಂತಹ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸಲು ಮುಂದೆ ಬಂದಿರುವದು ಪ್ರಶಂಸನೀಯ ಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.ಅವರು ಹೇಳಿದರು.
ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಭೇಟಿಯಾದ ನೂತನವಾಗಿ ಬಿ.ಎಲ್.ಓ.ಗಳಾಗಿ ನೇಮಕವಾದ ಶಿಕ್ಷಕರುಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಅರ್ಹ ಮತದಾರನು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಬಿ.ಎಲ್.ಓ.ಗಳ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಶಾಲಾ ಶಿಕ್ಷಕರನ್ನು ಬಿ.ಎಲ್.ಓ.ಗಳಾಗಿ ನಿಯೋಜಿಸಲಾಗುತ್ತಿದೆ. ಬಿ.ಎಲ್.ಓ.ಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವದರ ಮೂಲಕ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗಳು ಕರೇ ನೀಡಿದರು. ಈ ಸಂದರ್ಭದಲ್ಲಿ ಹೊಸದಾಗಿ ಬಿ.ಎಲ್.ಓ.ಗಳಾಗಿ ನೇಮಕಗೊಂಡಂತಹ ಶಿಕ್ಷಕರು ಹಾಜರಿದ್ದರು.
Gadi Kannadiga > State > ಸ್ವಯಂ ಪ್ರೇರಣೆಯಿಂದ ಬಿ.ಎಲ್.ಓ. ಕಾರ್ಯನಿರ್ವಹಣೆ ಪ್ರಶಂಸನೀಯ: ಜಿಲ್ಲಾಧಿಕಾರಿ
ಸ್ವಯಂ ಪ್ರೇರಣೆಯಿಂದ ಬಿ.ಎಲ್.ಓ. ಕಾರ್ಯನಿರ್ವಹಣೆ ಪ್ರಶಂಸನೀಯ: ಜಿಲ್ಲಾಧಿಕಾರಿ
Suresh02/08/2023
posted on
