ಕುಷ್ಟಗಿ:-ಸ್ಥಳೀಯ ಇನ್ನರ್ ವ್ಹೀಲ್ ಕ್ಲಬ್ ವಾತಿಯಿಂದ ಆರ್ಥಿಕ ವ್ಯವಸ್ಥೆ, ಬ್ಯಾಂಕ್ ವಹಿವಾಟು ಕುರಿತು ಶ್ರೀ ಅನ್ನದಾನೇಶ್ವರ ಕಾಲೇಜಿನಲ್ಲಿ ವಿಚಾರ ಗೋಷ್ಠಿಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಆರ್ಥಿಕ ತೆರಿಗೆ ಸಲಹೆಗಾರ ಮಲ್ಲಿಕಾರ್ಜುನ್ ಬಳಿಗಾರ ಅವರು ಮಾತನಾಡಿ ಆರ್ಥಿಕ ವ್ಯವಸ್ಥೆ ಎಂಬುದು ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ವಿಷಯವಾಗಿದೆ. ಬ್ಯಾಂಕಿಂಗ್ ವಹಿವಾಟು, ಹಣದ ಲೇವಾದೇವಿ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಆರ್ಥಿಕ ವ್ಯವಸ್ಥೆ ಮಾಡುವ ಬಗ್ಗೆ, ಬ್ಯಾಂಕ್ ಅಕೌಂಟ್ಸ್ ಮಾಡುವ, ಅಕೌಂಟ್ಸ್ ಎಲ್ಲಾ ವಿಭಾಗಗಳಲ್ಲಿ ಹೇಗೆ ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಇನ್ಸೂರೆನ್ಸ್ ಮಾಡಿಸುವದರಿಂದ ಆಗುವ ಲಾಭಗಳು,CA ಚಾರ್ಟೆಡ್ ಅಕೌಂಟ್ಸ್ ಕೋರ್ಸ್ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಇಂತಹ ವೃತ್ತಿಪರ ಕೋರ್ಸಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಯಾರೇ ಆಗಲೀ ಬ್ಯಾಂಕ್ ಲೋನ್ ಅಥವಾ ಆಸ್ತಿ ಅಡಮಾನ ಲೋನ್, ಬಿಜಿನೆಸ್ ಲೋನ್ ಹೀಗೆ ಹತ್ತು ಹಲವು ವಹಿವಾಟು ಮಾಡಲು ಸಿ.ಎ. ಕೋರ್ಸ ಮಾಡಿದವರ ಸಲಹೆ ಸಹಕಾರ ಪಡೆಯಲೇಬೇಕು. ಹೀಗೆ ಇಷ್ಟೆಲ್ಲ ಅನುಕೂಲ ಇರುವ ವೃತ್ತಿಪರ ಕೋರ್ಸ್ ಗಳನಗನು ಕಲಿಯಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ವಿವಿಧ ಪ್ರಶ್ನೆಗಳನ್ನು, ಸಂಶಯಗಳನ್ನು ಚರ್ಚಿಸಿ ಬ್ಯಾಂಕಿಂಗ್ ಬಗ್ಗೆ ತಿಳಿದುಕೊಂಡರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಪಾಟೀಲ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೂಟಿ, ಖಜಾಂಚಿ ಗೌರಮ್ಮ ಕುಡತನಿ, ಕ್ಲಬ್ ಎಡಿಟರ್ ಮೇಘಾ ದೇಸಾಯಿ,ಉಪಾಧ್ಯಕ್ಷೆ ಸುವರ್ಣ ಬಳೂಟಗಿ ಶೋಭಾ ಕಂದಕೂರ್, ಶಾರದಾ ಜಿಗಜಿನ್ನಿ, ವಿಜಯಶ್ರೀ ಬಳಿಗಾರ್ ಭಾಗವಹಿಸಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ