This is the title of the web page
This is the title of the web page

Please assign a menu to the primary menu location under menu

Local News

ಪತ್ರಕರ್ತರಿಗೆ ಭಾಷೆಯ ಪ್ರಭುದ್ಧತೆ ಮುಖ್ಯ : ಹಿರಿಯ ಪತ್ರಕರ್ತ ಡಾ ಬಸವರಾಜ ಹೊಂಗಲ


ಬಾಗಲಕೋಟ: ಸಮಯಪ್ರಜ್ಞೆ ಮತ್ತು ಕುತೂಹಲದೊಂದಿಗೆ ಭಾಷೆಯ ಹಿಡಿತ ಸಾಧಿಸಿದವನು ಯಶಸ್ವಿ ಪತ್ರಕರ್ತನಾಗಲು ಸಾಧ್ಯ. ಪತ್ರಿಕಾ ರಂಗದಲ್ಲಿ ಹೇರಳ ಅವಕಾಶಗಳಿದ್ದು ಪತ್ರಿಕೋದ್ಯಮ ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ವರದಿಗಾರ ಬಸವರಾಜ ಹೊಂಗಲ್ ಅವರು ಹೇಳಿದರು.

ಬವಿವ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಹಾಗೂ ಅದರ ಅಂಗವಾಗಿ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತನು ಪ್ರತಿಯೊಂದನ್ನು ಕುತೂಹಲದಿಂದ ನೋಡುವುದನ್ನು ರೂಡಿಸಿಕೊಳ್ಳಬೇಕು, ಸಮಾಜದಲ್ಲಿ ಆಗುಹೋಗುಗಳ ಬಗ್ಗೆ ಸದಾ ತಿಳಿದುಕೊಳ್ಳುತ್ತಿರಬೇಕು, ಪರಿಣಾಮಕಾರಿ ಸುದ್ದಿ ಹುಡುಕಲು ಸುದ್ದಿ ಮೂಲಗಳು ಅತ್ಯವಶ್ಯಕವಾಗಿದ್ದು ಅವುಗಳನ್ನು ಪತ್ರಕರ್ತ ಹೊಂದಿರಬೇಕು ಇದರಿಂದ ಸಮಾಜಪರವಾದ ಸುದ್ದಿಗಳನ್ನು ಬರೆಯಲು ಸಾಧ್ಯವಾಗುತ್ತದೆ. ಸಮಯ ಪ್ರಜ್ಞೆ ಮತ್ತು ನಿರಂತರ ಓದು ಪತ್ರಕರ್ತನ ದ್ಯೆಯವಾಗಬೇಕು ಎಂದರು.

ನಿರಂತರ ಅದ್ಯಯನದಿಂದ ಶಬ್ದ ಸಂಗ್ರಹ ಮತ್ತು ಬಾಷೆಯ ಮೇಲೆ ಹಿಡಿತ ಸಾಧಿಸಲು ಸಾದ್ಯ. ವರದಿಗಾರನಿಗೆ ಪ್ರಶ್ನೆಗಳನ್ನು ಕೇಳುವ ಕೌಶಲ್ಯ ಅವಶ್ಯವಾಗಿದ್ದು ಅದನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಡಿಸಿಕೊಳ್ಳಿ. ಪತ್ರಿಕಾ ರಂಗವು ಕೇವಲ ಸೇವೆಯ ಒಂದು ಭಾಗವಾಗಿರದೆ ಉದ್ಯಮವಾಗಿ ಬೇಳೆಯುತ್ತಿದ್ದು ಪೈಪೋಟಿಯಲ್ಲಿ ಪರಿಣಾಮಕಾರಿ ಪತ್ರಕರ್ತನಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಆದ್ದರಿಂದ ವಿಷಯ, ಸಾಮಾಜೀಕ ಬದಲಾವಣೆ, ತಂತ್ರಜ್ಞಾನ ಬೆಳವಣಿಗೆಗಳ ಕಡೆ ಗಮನವಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯ ಅಧ್ಯಕ್ಷ ಸ್ಥಾನ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ ಎಸ್ ಕಟಗಿಹಳ್ಳಿಮಠ ಅವರು ಮಾತನಾಡಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರದತ್ತ ಮುಖಮಾಡಬೇಕಿದೆ. ಪತ್ರಿಕೋದ್ಯಮವು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರವಾಗಿದ್ದು ಸಾಕಷ್ಟು ಅವಕಾಶಗಳು ನಿರ್ಮಾಣವಾಗುತ್ತಿವೆ. ವಿದ್ಯಾರ್ಥಿ ಜೀವನದಲ್ಲಿಯೇ ಪತ್ರಿಕೋದ್ಯಮದ ಬಗ್ಗೆ ಸರಿಯಾಗಿ ಕಲಿತು ಈ ರಂಗದಲ್ಲಿ ಉತ್ತಮ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಆಯ್.ಬಿ ಚಿಕ್ಕಮಠ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆ ಕೇವಲ ಒಂದು ಆಚರಣೆಯಾಗದೆ ಈ ರಂಗದ ಆಗುಹೋಗುಗಳ ಬಗ್ಗೆ, ಬದಲಾವಣೆ ಮತ್ತು ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಇದೆಲ್ಲದರ ಮನನ ಮಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉದ್ಘಾಟನಾ ಸಮಾರಂಭದ ಬಳಿಕ ಹಿರಿಯ ವರದಿಗಾರ ಬಸವರಾಜ ಹೊಂಗಲ್ ಅವರು ಪ್ರಸ್ತುತ ದಿನಗಳಲ್ಲಿ ಪತ್ರಿಕೆಗಳಲ್ಲಿ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಬಳಿಕ ಕಲರ್ಸ್ ಕನ್ನಡ ವಾಹಿನಿ ಸೃಜನಶೀಲ ಬರಹಗಾರರಾದ ಮಂಜುನಾಯಕ್ ಚಳ್ಳೂರ ಅವರು ಬೆಳ್ಳಿ ಪರದೆಯ ಬರವಣಿಗೆ ಮತ್ತು ಅವಕಾಶ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ಪಿ ದೊಡವಾಡ, ಪ್ರೊ. ಎಸ್.ಆರ್ ಮುಗನೂರಮಠ, ಡಾ.ಆರ್ ಎಮ್ ಬೆನ್ನೂರ, ಪ್ರೊ. ಜಯಶ್ರೀ ನಾಗಲೋಟಿ, ಪ್ರೊ. ಮಂಜುನಾಥ ದೇವನಾಳ. ಡಾ.ಮಂಜುಳಾ ಚವ್ಹಾನ, ಡಾ.ಲಲಿತಾ ಚವಡಿ, ಪ್ರೊ. ಚಂದ್ರಕಾಂತ ಚೌಕಿಮಠ, ವೀಣಾ ಕಲ್ಮಠ, ಪ್ರೊ.ವಡ್ಡರ, ಬವಿವ ಮಹಾವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಶ್ರೀ ಎಸ್ ಆರ್ ಕಂಠಿ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply