ಕುಷ್ಟಗಿ:- ಹಿರಿಯ ಪತ್ರಕರ್ತರಾಗಿದ್ದ ಶರಣಪ್ಪ ಕುಂಬಾರ ಅವರು, ಬುಧವಾರ ರಾತ್ರಿ ನಿಧನರಾಗಿದ್ದು, ಅತ್ಯಂತ ದುಃಖ,ನೋವಿನ ಸಂಗತಿ, ತಮ್ಮ ಬರಹಗಳ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದ ಶರಣಪ್ಪ ಕುಂಬಾರ ರವರು ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.ನಂತರ ಅವರ ಸಂಪಾದಕತ್ವದಲ್ಲಿ ಕೃಷಿ ಪ್ರಿಯ ಪತ್ರಿಕೆ ಪ್ರಾರಂಭಿಸಿದ್ದರು.ಈಗ ಅವರ ಅಗಲಿಕೆಯಿಂದ ಪತ್ರಿಕಾ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪತ್ರಕರ್ತರಾದ ಆರ್ ಶರಣಪ್ಪ ಗುಮಗೇರಾ ರವರು ಹೇಳಿದ್ದಾರೆ.ಕರ್ನಾಟಕ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಹಾಗೂ ಕುಷ್ಟಗಿ ತಾಲೂಕ ಘಟಕದ ಪತ್ರಿಕಾ ಬಳಗದವರ ವತಿಯಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಮೃತರ ಅಂತ್ಯ ಕ್ರಿಯೆ ಗುರುವಾರ ಮಧ್ಯಾನ್ಹ 01 ಗಂಟೆಗೆ ಸ್ವಗ್ರಾಮ ಹನಮನಾಳ ದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.