This is the title of the web page
This is the title of the web page

Please assign a menu to the primary menu location under menu

State

ನರಗುಂದ ತಾಲೂಕಿನ ಸ್ಥಿರಾಸ್ಥಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ ೩ ಕೊನೆಯ ದಿನ


ಗದಗ ಅಗಸ್ಟ ೨೩: ನರಗುಂದ ತಾಲೂಕಿನ ಸ್ಥಿರಾಸ್ಥಿಗಳ ಬೆಲೆಯನ್ನು ೨೦೨೩-೨೪ ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ಮುದ್ರಾಂಕ ಕಾಯ್ದೆಯ ಮಾರುಕಟ್ಟೆ ದರಗಳನ್ನು ಅಂದಾಜು ಮಾಡುವ , ಪ್ರಕಟಿಸುವ ಮತ್ತು ಪರಿಷ್ಕರಿಸುವ ನಿಯಮಗಳ ಪ್ರಕಾರ ೨೦೨೩-೨೪ ನೇ ಸಾಲಿಗೆ ಪರಿಷ್ಕರಿಸಿ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕರಡು ಪ್ರತಿಯನ್ನು ಉಪನೊಂದಣಾಧಿಕಾರಿಗಳ ಕಚೇರಿ ನರಗುಂದ ಸೂಚನಾ ಫಲಕದಲ್ಲಿ ಸಾರ್ವಜನಿಕ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳಿಗಾಗಿ ಪ್ರಕಟಿಸಲಾಗಿದೆ. ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಪಟ್ಟವರು ಸೂಕ್ತ ದಾಖಲೆಗಳೊಂದಿಗೆ ಸೆಪ್ಟೆಂಬರ್ ೩ ರೊಳಗಾಗಿ ನರಗುಂದ ಉಪನೊಂದಣಾದಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.


Leave a Reply