This is the title of the web page
This is the title of the web page

Please assign a menu to the primary menu location under menu

State

ಕಸಾಪ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭ


ಕುಷ್ಟಗಿ:- ಹಿರೇಮನ್ನಾಪೂರ ಗ್ರಾಮದ ಶ್ರೀ ಗವಿಸಿದ್ದೇಶ್ವರ ಅನುದಾನಿತ ಪ್ರೌಢಶಾಲೆ ಆವರಣದಲ್ಲಿ ದಿನಾಂಕ 3-10-2022 ರಂದು ಸೋಮವಾರ ಬೆಳಗ್ಗೆ 9:30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ. ಬ್ರ. 108 ಶ್ರೀ ಕರಿಬಸವ ಶಿವಾಚಾರ್ಯರು ಮದ್ದಾನಿ ಹಿರೇಮಠ ಕುಷ್ಟಗಿ,ವ ಹಿರೇಮನ್ನಾಪುರ,ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಡಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಗೌಡ ಪೊಲೀಸ್ ಪಾಟೀಲ್ ಕಸಾಪ ಜಿಲ್ಲಾಧ್ಯಕ್ಷರು ಕೊಪ್ಪಳರವರು ವಹಿಸಿಕೊಳ್ಳಲಿದ್ದು ,ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು, ಹಾಗೂ ಹಸೇನಸಾಬ ದೋಟಿಹಾಳ, ಹಾಗೂ ಮಾಜಿ ಶಾಸಕ ಹಾಗೂ ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್ ವಹಿಸಿಕೊಳ್ಳಲಿದ್ದಾರೆ.ಶೇಖರಗೌಡ ಮಾಲಿಪಾಟೀಲ್ ಮಾಜಿ ಜಿಲ್ಲಾಧ್ಯಕ್ಷರು ಕಸಾಪ ಕೊಪ್ಪಳ ರವರು ಆಶಯ ನುಡಿಗಳನ್ನುಡಲಿದ್ದಾರೆ.

 

 

ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸರ್ವ ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪರ ಸಂಘಟನೆಗಳು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರೇಮನ್ನಾಪುರ ಗ್ರಾಮದ ಗುರುಹಿರಿಯರು ಮಾಡಲಿದ್ದಾರೆ.ಎಂದು ಕಸಾಪ ಸಮತಿಯವರು ತಿಳಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply