This is the title of the web page
This is the title of the web page

Please assign a menu to the primary menu location under menu

State

ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭ


ಬೆಳಗಾವಿ: ಕಳೆದ 31  ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿಯ ಒಂದನೇ ಘಟಕದಲ್ಲಿ ಸಾರಿಗೆ ನಿಯಂತ್ರಕರಾದ ಶ್ರೀ ವಿ. ಎಮ್. ಅಂಗಡಿ ಮತ್ತು ಶ್ರೀ ಅಗಸಿಮನಿಯವರ ಸೇವಾ ನಿವೃತ್ತಿ ಸಮಾರಂಭ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಘಟಕ ವ್ಯವಸ್ಥಾಪಕರಾದ ಶ್ರೀ ಎಲ್. ಎಸ್. ಲಾಠಿಯವರು ಮಾತನಾಡುತ್ತ, ಅಂಗಡಿಯವರ ಶಿಸ್ತು ಸಂಯಮ ಆದರ್ಶಗಳು ನಮ್ಮ ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತಂದು ಕೊಟ್ಟಿವೆ. ಅಂಗಡಿಯವರ ಸುದೀರ್ಘ 34 ವರ್ಷಗಳ ಸಾರ್ಥಕ ಸೇವೆಯನ್ನು ಮನಸಾರೆ ಹೊಗಳಿದರು.ಸಹಾಯಕ ಸಂಚಾರ ಅಧೀಕ್ಷಕರಾದ ಶ್ರೀ ಜಟಗೊಂಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅಂಗಡಿಯವರು ಹಾಗೂ ಅಗಸಿಮನಿಯವರ ಅಮೋಘ ಸೇವೆಯನ್ನು ಶ್ಲಾಘಿಸಿದರು. ನಿರ್ವಹಕರಾದ ಶ್ರೀ ವಿಭೂತಿಯವರು ಕಾರ್ಯಕ್ರಮ ನಿರೂಪಿಸಿದರು. ಕೌಜಲಗಿಯವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಮಿಕ ಮುಖಂಡರಾಡ್ ಶ್ರೀ ಸಿ. ಎಸ್. ಬಿದ್ನಾಳ್, ಎಸ್. ಏನ್. ಬೆಣ್ಣಿ, ನಿಂಗಪ್ಪ ಚವಲಗಿ,ಬಿಳ್ಳೂರ್, ತಮ್ಮನಕಟ್ಟಿ, ಮತ್ತು ಬೆಳಗಾವಿ ವಿಭಾಗದ ಎಲ್ಲ ಸಹುದ್ಯೋಗಿಗಳು ಉಪಸ್ಥಿತರಿದ್ದರು.


Leave a Reply