This is the title of the web page
This is the title of the web page

Please assign a menu to the primary menu location under menu

Local News

17 ಸೆಪ್ಟೆಂಬರ್ ನಿಂದ 2ನೇ ಅಕ್ಟೋಬರ್ ವರೆಗೆ “ಸೇವಾ ಪಾಕ್ಷಿಕ”


ಬೆಳಗಾವಿ : ಕೇಂದ್ರ ಸರ್ಕಾರವು ಬಡವರ ಸೇವೆ, ಒಳ್ಳೇಯ ಉತ್ತಮ ಆಡಳಿತ ಮತ್ತು ಕಲ್ಯಾಣಕ್ಕಾಗಿ ಬದ್ಧವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಎಂ.ಬಿ ಝಿರಲಿ ಹೇಳಿದರು

ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲೆ ವತಿಯಿಂದ 17 ಸೆಪ್ಟೆಂಬರ್ ನಿಂದ 2ನೇ ಅಕ್ಟೋಬರ್ ವರೆಗೆ “ಸೇವಾ ಪಾಕ್ಷಿಕ” ನಡೆಸಲಿದೆ ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು. ದಿವ್ಯಾಂಗಿಗಳಿಗೆ ಕೃತಕ ಕಾಲುಗಳನ್ನು ಹಂಚುವುದು. ಕಾರ್ಯಕರ್ತರಿಂದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವುದು.
ಭಾರತವನ್ನು ಕ್ಷಯರೋಗದಿಂದ ಸಂಪೂರ್ಣ ಮುಕ್ತಗೊಳಿಸಲು 2025 ನೇ ವರ್ಷವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ವಿಶ್ವ ಕ್ಚಯ ರೋಗ ನಿರ್ಮೂಲನೆ 2030ಕ್ಕಿಂತ 5 ವರ್ಷಗಳ ಮುನ್ನವೇ ಸಾಧಿಸಲು ಪಣತೊಟ್ಟಿದ್ದಾರೆ. ಸ್ವಚ್ಛತಾ ಅಭಿಯಾನ ಹಾಗೂ Vocal for Local ಅಡಿಯಲ್ಲಿ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಜಾಗೃತಗೊಳಿಸುವುದು.

ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಂಜಯ್ ಪಾಟೀಲ, ಬೆಳಗಾವಿ ಸಂಸದೆ ಮಂಗಳಾ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯರಾದ ಈರಣ್ಣಾ ಕಡಾಡಿ, ರಾಜ್ಯ ವಕ್ತಾರರಾದ ಎಂ.ಬಿ. ಝಿರಲಿ, ಮಹಾನಗರ ಪ್ರಧಾನ ಕಾರ್ಯದರ್ಶಿ ಬಿರಾದಾರ, ಮಹಾನಗರ ಮಾಧ್ಯಮ ಸಂಚಾಲಕ ಶರದ ಪಾಟೀಲ, ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ.ಎಸ್. ಸಿದ್ಧನಗೌಡರ, ಮಹಾನಗರ ವಕ್ತಾರರಾದ ಪ್ರಭು ಹೂಗಾರ, ಗ್ರಾಮಾಂತರ ಜಿಲ್ಲಾ ವಕ್ತಾರರು ಸಂಜಯ ಕಂಚಿ, ಮಹಾನಗರ ಸಾಮಾಜಿಕ ಜಾಲತಾಣ ಸಂಚಾಲಕರಾದ ಕೇದಾರ ಜೋರಾಪುರ, ಗ್ರಾಮಾಂತರ ಜಿಲ್ಲಾ ಮಾಧ್ಯಮ ಉಸ್ತುವಾರಿಗಳಾದ ಮಲ್ಲಿಕಾರ್ಜುನ ಮದಿಗೌಡರ, ಗ್ರಾಮಾಂತರ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ನಿತೀನ್ ಚೌಗುಲೆ, ಮಾಧ್ಯಮ ಸಹ ಸಂಚಾಲಕರಾದ ಪ್ರಜ್ವಲ ಅಥಣ ಮಠ, ಸಹ ವಕ್ತಾರರಾದ ಶಶಿ ಬಡಕರ, ಇತರೇ ಪದಾಧಿಕಾರಿಗಳು ಉಪಸ್ಥಿತಿರಿದ್ದರು.


Gadi Kannadiga

Leave a Reply