This is the title of the web page
This is the title of the web page

Please assign a menu to the primary menu location under menu

Local News

ಏಳನೇ ಉಚಿತ ಆರೋಗ್ಯ ತಪಾಸಣಾ ಶಿಬಿg


ಬೆಳಗಾವಿ :ಆಗಷ್ಟ-೦೮: “ಆಧುನಿಕ ಜೀವನ ಪದ್ಧತಿಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತಿದೆ. ಹೀಗಾಗಿ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ” ಎಂದು ಬೆಳಗಾವಿಯ ಆಶ್ರಯ ಫೌಂಡೇಶನ್ ಸಂಸ್ಥಾಪಕಿ ಸಫಲ ನಾಗರತ್ನ ಅಭಿಪ್ರಾಯ ಪಟ್ಟರು.
ಸಿ.ಎಸ್.ಆರ್. ಇನಿಸಿಯೇಟಿವ್ ರೈಟ್ಸ್ ಲಿಮಿಟೆಡ್ ಬೆಳಗಾವಿಯ ಆಶ್ರಯ ಫೌಂಡೇಶನ್ ವತಿಯಿಂದ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಭೀಮನಗೌಡ ಪೊಲೀಸಪಾಟೀಲ ಸಹಕಾರದೊಂದಿಗೆ ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಜರುಗಿದ
‘ಏಳನೇ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು “ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹೆಚ್ಚಿನ ಜನರು ಇಂಥ ಶಿಬಿರಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು” ಎಂದರು.
ಡಾ.ರೇಖಾ ಮರಾಠ ಮಂಡಲ್ ಕಾಲೇಜ್ ವತಿಯಿಂದ ಶಿಬಿರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೈಟ್ಸ್ ಲಿಮಿಟೆಡ್ ಇಂಡಿಪೆಂಡೆಂಟ್ ನಿರ್ದೇಶಕರಾದ ಲಕ್ಷ್ಮಣ ತಪಶಿ ಅವರು ಮಾತನಾಡಿ, ” ಆಶ್ರಯ ಫೌಂಡೇಶನ ಈಗಾಗಲೇ ಆರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು ಪ್ರಸ್ತುತ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಮಾಜಿ ಸಚಿವರಾದ ರಮೇಶ ಜಾರಕಿಹೊಳಿಯವರು ಹಾಗೂ ಮುಖಂಡರಾದ ಭೀಮಗೌಡ ಪೊಲೀಸಪಾಟೀಲ ಅವರಿಗೆ ಧನ್ಯವಾದ ಅರ್ಪಿಸಿದರು.
ಶಿಬಿರದಲ್ಲಿ ೩೫೦ಕ್ಕೂ ಹೆಚ್ಚು ಜನರು ಉಚಿತ ಕಣ್ಣು ಮತ್ತು ದಂತ, ಎಲುಬು ಮತ್ತು ಕೀಲು ನೋವು ತಪಾಸಣೆ, ಬಿಪಿ ತಪಾಸಣೆ, ಶುಗರ್ ,ಬ್ಲಡ್ ಗ್ರೂಪ್ , ಎಚ್ ಬಿ ರಕ್ತಸಪಾಸಣೆ ಮಾಡಿಕೊಂಡರು. ಅದರೊಂದಿಗೆ ಉಚಿತವಾಗಿ ಮಾತ್ರೆ ಔಷಧಿ ,ಪ್ರೋಟೀನ್- ಪೌಡರ್ ವಿತರಿಸಲಾಯಿತು.
ಅಂಕಲಗಿಯ ಅಡವಿ ಸಿದ್ದೇಶ್ವರ ಮಠದ ಶ್ರೀಗಳು ಶಿಬಿರದ ಯಶಸ್ವಿಗೋಸ್ಕರ ಆಶೀರ್ವದಿಸಿದರು
ಆಶ್ರಯ ಫೌಂಡೇಶನ್ ಸ್ವಯಂಸೇವಕರು, ಸಂಜೀವ, ನಳಿನ, ಅನಿಲ, ರಾಹುಲ, ಜ್ಞಾನೇಶ, ಕುನಾಲ, ವಿನೋದ, ದೀಪಕ, ರಾಹುಲ ಕೆ, ಶ್ವೇತಾ ಹಾಗೂ ಆಶ್ರಯ ಮಕ್ಕಳು ಮತ್ತು
ಡಾ.ವಿನಯ ಡಾ.ಪ್ರೇಮ ಮಠಪತಿ, ವಿನೋದ, ಸಂಜು, ಪ್ರಜ್ವಲ, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಂಸ್ಥೆಗಳಾದ ಶ್ರೀ ಅರ್ಥ ಮತ್ತು ಟ್ರಾಮಾ ಸೆಂಟರ್, ಸಿದ್ದಾರ್ಥ ನೇತ್ರಾಲಯ, ಭರತೇಶ ಹೋಮಿಯೋಪತಿ ಕಾಲೇಜ್, ಕಸ್ಬೇಕರ್ ಮೆಟಗುಡ್ ಕ್ಲಿನಿಕ್, ಮರಾಠಾ ಮಂಡಲ ಕಾಲೇಜ್, ಅಂಕಲಗಿಯ ಸರ್ಕಾರಿ ಶಾಲೆಯ ಶಿಕ್ಷಕರು, ಅಂಕಲಗಿ ಗ್ರಾಮಸ್ಥರು ಶಿಬಿರದ ಯಶಸ್ವಿಗೆ ಕಾರ್ಯ ನಿರ್ವಹಿಸಿದರು.
ಸರ್ಕಾರಿ ಶಾಲೆಯ ಶಿಕ್ಷಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿಕ್ಷಕ ರಾಜು ಕೊಡೋಲಿ ನಿರ್ವಹಿಸಿದರು.


Gadi Kannadiga

Leave a Reply