ಬೆಳಗಾವಿ:ಮೇ-೧೯: “ವಿವಿಧತೆಯಲ್ಲಿ ಏಕತೆ ಕಾಣುವ ಮೂಲಕ ಸರ್ವರನ್ನು ಸಮಾನವಾಗಿ ಕಾಣುವ ಮನೋಭಾವ ನಮ್ಮಲ್ಲಿ ಮೂಡಬೇಕು. ಅದರಲ್ಲೂ ವಿಕಲಚೇತನರನ್ನು ಅನುಕಂಪಕ್ಕಿಂತಲೂ ಪ್ರೀತಿ-ವಾತ್ಸಲ್ಯದಿಂದ ಕಾಣಬೇಕು. ಅವರಲ್ಲಿರುವ ಕೌಶಳಗಳನ್ನು ಗುರುತಿಸಿ ಸಹಾಯ, ಸಹಕಾರ ನೀಡಿದರೆ ಅವರೂ ಸ್ವಾವಲಂಬನೆಯ ಜೀವನ ಸಾಗಿಸಬಹುದಾಗಿದೆ” ಎಂದು ಬೆಳಗಾವಿಯ ಸಂಸದೆ ಮಂಗಲಾ ಅಂಗಡಿ ಅಭಿಪ್ರಾಯ ಪಟ್ಟರು.
ಬೆಳಗಾವಿಯ ದಿ ಅಸೋಸಿಯೇಷನ್ ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್, ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯಾದ ವೈಸ್ ಆಫ್ ಫಿಸಿಕಲಿ ಏಬಲ್ಡ್ ಪೀಪಲ್ ಇವರ ಸಹಯೋಗದೊಂದಿಗೆ ‘ದಿವ್ಯಾಂಗರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ದಿವ್ಯಾಂಗರಿಗೆ ಗಾಡಿಗಳ ವಿತರಣಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು
ವಿಕಲಚೇತನರಿಗೆ ಹೊಲಿಗೆ ಯಂತ್ರ ಹಾಗೂ ಗಾಡಿಗಳನ್ನು ವಿತರಿಸಿ ಮಾತನಾಡಿದ ಅವರು, “ವಿಶೇಷಚೇತನರೇಂದರೆ ಅವರಲ್ಲಿ ವಿಶೇಷ ಸಾಮರ್ಥ್ಯವುಳ್ಳವರು, ವಿಶೇಷ ವ್ಯಕ್ತಿತ್ವವುಳ್ಳವರು, ವಿಶೇಷವಾದದ್ದನ್ನು ಮಾಡುವಂತವರು. ಎರಡು ಅಸೋಸಿಯೇಷನ್ ಗಳು ದಿವ್ಯಾಂಗರಿಗೆ ಅನೇಕ ಸೌಲಭ್ಯಗಳನ್ನು ನೀಡಿ ಅವರು ಸ್ವಾವಲಂಬನೆ ಜೀವನ ನಡೆಸುವಂತಾಗಲಿ” ಎಂದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನನ ಕಾರ್ಯದರ್ಶಿಗಳಾದ ಗಿರೀಶ ಸವ್ವಾಸೇರಿ, ವಾಯ್ಸ್ ಆಫ್ ಸ್ಪೆಸಿಯಲಿ ಏಬಲ್ಡ್ ಪೀಪಲ್ ನ ಸಂಸ್ಥಾಪಕರಾದ ಪ್ರಣವ ದೇಸಾಯಿ, ಎಜಿಸಿಕ್ಯೂಟಿವ್ ಮೆಂಬರ್ ವಿಜಯ ಚೌಗಲೆ, ಅಸೋಸಿಯೇಷನ್ ನ ಸರ್ವಸದಸ್ಯರು, ಪದಾಧಿಕಾರಿಗಳು ಹಾಗೂ ನಾಗರೀಕರು ಪಾಲ್ಗೊಂಡಿದ್ದರು.
Gadi Kannadiga > Local News > ದಿವ್ಯಾಂಗರಿಗೆ ಹೊಲಿಗೆ ಯಂತ್ರ ವಿತರಣೆ
More important news
ಮಗುವಿನ ಜೈವಿಕ ಪಾಲಕರು ಸಂಪರ್ಕಿಸಲು ಕೋರಿಕೆ
07/07/2022
ಆಗಷ್ಟ ೧೩ ರಂದು ಲೋಕ ಅದಾಲತ್
07/07/2022
‘ಹಾಸ್ಯ ರಸಾಯನ’ ಕಾರ್ಯಕ್ರಮ
06/07/2022