ಮೂಡಲಗಿ: ಭೂಮಿಗೆ ಬಿದ್ದ ಬೀಜ, ಕಲಿತುಕೊಂಡ ಜ್ಞಾನ ಯಾವತ್ತು ಕೈ ಬಿಡುವುದಿಲ್ಲ ಎನ್ನುವ ಹಾಗೆ ಮಹಿಳೆಯರು ಯಾವಾಗಲೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಧರ್ಮಸ್ಥಳ ಯೋಜನೆಯಿಂದ ಸಾಕಷ್ಟು ಸ್ವ ಉದ್ಯೋಗ ಮಾಡುವ ತರಬೇತಿ ನೀಡುತ್ತಿದ್ದು ಅದರ ಸಫಲತೆ ಪಡೆದುಕೊಂಡು ಸಮಾಜ ಗುರುತಿಸುವಂತ ಒಬ್ಬ ಆದರ್ಶ ಮಹಿಳೆಯಾಗಿ ಬೆಳೆಯಬೇಕು ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ಹುಣಶ್ಯಾಳ ಪಿಜಿ ಕಾರ್ಯಕ್ಷೇತ್ರದಲ್ಲಿ ಧರ್ಮಟ್ಟಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿಯ ಉದ್ಘಾಟಿಸಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ, ಮಹತ್ವ, ಮಹಿಳೆಯರಿಗಾಗಿ ಯೋಜನೆಯಿಂದ ನಡೆಸುವ ಕಾರ್ಯಕ್ರಮಗಳ ಬಗ್ಗೆ ಸ್ವ-ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ನೀಡಿ ಅದರ ಬಳಕೆ ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಹೆಣ್ಣು ಮಕ್ಕಳು ಮನೆಯಲ್ಲಿ ಖಾಲಿ ಇರುವ ಸಮಯದಲ್ಲಿ ಮನೆಯಲ್ಲೇ ಸ್ವ-ಉದ್ಯೋಗ ಮಾಡಿ ಕುಟುಂಬದ ನಿರ್ವಹಣೆಗೆ ಸಹಕರಿಸಿ ಎಂದರು.
ಧರ್ಮಟ್ಟಿ ಗ್ರಾ.ಪಂ ಪಿಡಿಒ ಪಿ.ಯ್.ಬಾರ್ಕಿ ಮಾತನಾಡಿ, ಗ್ರಾಮ ಅಭಿವೃದ್ಧಿ ಕಾರ್ಯಕ್ರಮ ಬಗ್ಗೆ ಯೋಜನೆ ಪ್ರತಿಯೊಂದು ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಯೋಜನೆಯಾಗಿದ್ದು ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ, ಮಹಿಳೆಯರು ಯೋಜನೆಯ ಹೊಲಿಗೆ ತರಬೇತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಕಾರ್ಯಕ್ರಮದಲ್ಲಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ರಾಜು ನಾಯಕ್, ಗ್ರಾ.ಪಂ ಕಾರ್ಯದರ್ಶಿ ಬಿ.ಎಲ್.ಹತ್ತರಕಿ, ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿಗಳು ಹಾಗೂ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
Gadi Kannadiga > Local News > ಸಂಗೊಳ್ಳಿ ರಾಯಣ್ಣ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ
ಸಂಗೊಳ್ಳಿ ರಾಯಣ್ಣ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ
Suresh30/08/2023
posted on
