ಬೆಳಗಾವಿ: “ಶಬರಿಗಿರಿಯ ಅಯ್ಯಪ್ಪ ಸ್ವಾಮಿ ಪ್ರಭಾವಿಶಾಲಿ ದೈವವಾಗಿದ್ದು, ಭಕ್ತರು ಇವತ್ತು ದೇಶಾದ್ಯಂತ ಮಹಾಪೂಜೆಗಳನ್ನು ಕೈಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಹಿಷಿ ಸಂಹಾರಕ್ಕಾಗಿ ಧರ್ಮಶಾಸ್ತನಾಗಿ ಅವತರಿಸಿದ ಹರಿಹರಸುತನು ಶಬರಿಗಿರಿಯಲ್ಲಿ ಅಯ್ಯಪ್ಪನಾಗಿ ಪೂಜೆ ಸ್ವೀಕರಿಸಿ, ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಾನೆ,” ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಹೇಳಿದರು.ಅವರು, ಮೊದಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶಬರಿಮಲೈ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯಲ್ಲಿ ಭಾಗಿಯಾಗಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.”ಶಬರಿಮಲೈ ಅಯ್ಯಪ್ಪನನ್ನು ಆರಾಧಿಸಲು ಭಕ್ತರ ಭಕ್ತಿಯೇ ಪ್ರಧಾನವಾದುದು. ಶ್ರೀ ಅಯ್ಯಪ್ಪನನ್ನು ಪೂಜಿಸಲು ಕೋಟ್ಯಾಂತರ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುತ್ತಿರುವುದು ಶಾಸ್ತ್ರಾರನ ಶಕ್ತಿಗೆ ಸಾಕ್ಷಿ,” ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಸವರಾಜ ಕಲ್ಲೂರ, ಉಮೇಶ ದಾನೋಜಿ ಮಂಜು ತುಕ್ಕಾರ, ಪಾಂಡು ಬಡಗಾವಿ, ಸಿದ್ದಪ್ಪ ಭಾತ್ಕಂಡೆ, ಶಿವಾನಂದ ರಾಜಗೋಳಿ, ಸಂಭಾಜಿ ಕಾಳೆ, ಯೂನಿಸ್ ಭಾಗವಾನ, ಚೇತನ ಮಾರಿಹಾಳ, ಸುಧೀರ್ ಮುಗಳಿ, ಬಸವಂತ ಕಾಳೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ಭಕ್ತರ ಕಷ್ಟಕಾರ್ಪಣ್ಯ ಪರಿಹರಿಸುವ ಶಕ್ತಿ ಶಬರಿಗಿರಿ ಅಯ್ಯಪ್ಪ : ಲಕ್ಷಿ÷್ಮÃ ಹೆಬ್ಬಾಳಕರ್
ಭಕ್ತರ ಕಷ್ಟಕಾರ್ಪಣ್ಯ ಪರಿಹರಿಸುವ ಶಕ್ತಿ ಶಬರಿಗಿರಿ ಅಯ್ಯಪ್ಪ : ಲಕ್ಷಿ÷್ಮÃ ಹೆಬ್ಬಾಳಕರ್
Suresh27/12/2022
posted on