This is the title of the web page
This is the title of the web page

Please assign a menu to the primary menu location under menu

Local News

ಪರಿಷತ್ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಕ್ಕೆ ಪಾಠ ಕಲಿಸುತ್ತೇವೆ: ಶಂಕರ ಮಾಡಲಗಿ


ರಾಷ್ಟ್ರೀಯ ಪಕ್ಷಗಳು ಹಾಗೂ ಪಕ್ಷದ ನಾಯಕರುಗಳು ಸಾಮಾನ್ಯ ಜನರಿಗೆ ಸ್ಪಂಧಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಮತ್ತು ಪದವಿದರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರು ಹೇಳಿದರು.

ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಹೇಗೆ ಕಚ್ಚಾಡುತ್ತಿವೆ ಅಂತಾ ಗೊತ್ತು, ಮತ್ತೆ ಸಾಮಾನ್ಯ ಜನರಿಗೆ ನಿಲುಕದಂತ ಪಕ್ಷ ಹಾಗೂ ಪಕ್ಷದ ನಾಯಕರು ಅವರು, ಇಂತಾ ಪರಿಸ್ಥಿತಿ ಜಿಲ್ಲೆಯಲ್ಲಿದೆ,, ಎರಡೂ ಪಕ್ಷಗಳು ಜನರನ್ನು ಕೂಡಿಸಿ ತಮ್ಮ ಪ್ರತಿಷ್ಠೆ ತೋರಿಸ್ತಾ ಇವೆ, ಆದರೆ ಇದೇ ಶಿಕ್ಷಕರು ನಿರ್ಣಯ ಮಾಡುವಂತ ಸೂಕ್ಷ್ಮ ಚುನಾವಣೆ,  ಅಂತಾ ಶಿಕ್ಷಕರು ನಮ್ಮ ಅಭ್ಯರ್ಥಿಯ ಜೊತೆ ಇದ್ದಾರೆ ಎಂದರು..  ಅವರು ದೊಡ್ಡ ರೆಸ್ಟೋರೆಂಟ್ ಅಲ್ಲಿ, ಆಡಂಬರದ ಕಾರ್ಯಕ್ರಮ ಮಾಡಿದರೆ, ಅಲ್ಲಿ ಹೋದವರು ಅವರ ಕಾರ್ಯಕರ್ತರು, ಆದರೆ ನಾವು,  ಅನ್ನ ಸಾರು ಕೊಟ್ಟರೂ ಸಹ ನಮ್ಮ ಕಡೆ ಬರುವವರು ಶಿಕ್ಷಕರು, ಬುದ್ದಿವಂತ ಶಿಕ್ಷಕರು ಪಕ್ಷದ ದ್ವಜ  ಹಿಡಿದುಕೊಂಡು ಅವರ ಹಿಂದೆ ಯಾಕೆ ಹೊದಾರು ??  ಆದರಿಂದ ಈ ಚುನಾವಣೆಯಲ್ಲಿ  ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಪಾಠ ಕಲಿಸುತ್ತೇವೆ ಎಂದರು.

ಇನ್ನು ತಮ್ಮ ಪಕ್ಷದ ಅತಿ ಪ್ರಭಾವಿತ ವ್ಯಕ್ತಿ ಬಸವರಾಜ್ ಹೊರಟ್ಟಿ ಅವರು ಪಕ್ಷ ಬಿಟ್ಟು ಹೋದದ್ದು ತಮ್ಮ ಪಕ್ಷಕ್ಕೆ ಹಿನ್ನಡೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ, ಜೆಡಿಎಸ್ ಪಕ್ಷದ ಜಿಲ್ಲಾ ವಿಕಲಚೇತನ ಅಧ್ಯಕ್ಷರಾದ  ಪ್ರಭುಗೌಡ ಪಾಟೀಲ್,  ಬಸವರಾಜ್ ಹೊರಟ್ಟಿ ಅವರು ಪಕ್ಷ ಬದಲಿಸಿರಬಹುದು ಆದರೆ ಶಿಕ್ಷಕರ ಸಂಘಟನೆ ಮಾತ್ರ ಅದೇ ಇದೆ. ಅವರು ಯಾವತ್ತೂ ಶಿಕ್ಷಕರೇ, ಪಕ್ಷಕ್ಕಿಂತ ಇಲ್ಲಿ ವೃತ್ತಿ ಮುಖ್ಯ, ಅವರ ಮಾರ್ಗದರ್ಶನ, ಪ್ರಭಾವ ನಮ್ಮ ಮೇಲೆ ಯಾವತ್ತೂ ಇರುತ್ತೆ, ಅವರು ಬೇರೆ ಪಕ್ಷಕ್ಕೆ ಹೋಗಿರಬಹುದು ಆದರೆ ಅವರ ಅನುಯಾಯಿ ಶಿಕ್ಷಕರೆಲ್ಲ, ಸಂಘಟನೆಯ ಸದಸ್ಯರೆಲ್ಲ, ಶಿಕ್ಷಕರ ಬಗ್ಗೆ ಕಾಳಜಿ ಇರುವ ಜೆಡಿಎಸ್ ಜೊತೆಗೆನೇ ಇರ್ತಾರೆ ಎಂದರು.

ಈ ವೇಳೆ ಮಾತನಾಡಿದ ಜೆಡಿಎಸ್ ಪಕ್ಷದ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾದ ಚಂದ್ರಶೇಖರ್ ಲೂನಿ ಅವರು ಇವತ್ತು ನಮ್ಮ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ  ಶಂಕರ ಮಾಡಲಗಿ  ಹಾಗೂ ತಾಲೂಕು ಪದಾಧಿಕಾರಿಗಳ ಜೊತೆಗೆ ಚುನಾವಣಾ ಪ್ರಚಾರದ ವಿಷಯಗಳ ಚರ್ಚೆನಡೆದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಳ್ತಾ ಇದೀವಿ,, ಸುಮಾರು ಒಂದು ವರ್ಷದಿಂದ ಶಿಕ್ಷಕ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಎಲ್ಲಾ  ತಯಾರಿ  ಮಾಡಿಕೊಂಡು, ಕ್ಷೇತ್ರದ ಸಮಸ್ಯೆಗಳ, ಅವಶ್ಯಕತೆಗಳ ಬಗ್ಗೆ ತಿಳಿದು, ಪರಿಹಾರೋಪಾಯಗಳನ್ನು ಕೂಡಾ ಸಂಬಂಧಿಸಿದವರೊಂದಿಗೆ ಚರ್ಚಿಸಿದ್ದೇನೆ ಎಂದರು.

ಜೆಡಿಎಸ್ ಪಕ್ಷವು ಶಿಕ್ಷಣ ಹಾಗೂ ಶಿಕ್ಷಕರ ಪರವಾದ ಪಕ್ಷ ಆಗಿರುವದರಿಂದ ನಾನು ಈ ಪಕ್ಷದಿಂದ ಸ್ಪರ್ಧೆ ಮಾಡಲು ಮುಂದಾದೆ,, ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ, ಮಕ್ಕಳಿಗೆ ಹತ್ತು ಹಲವಾರು ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ್ದಾರೆ.. ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಮಾಡಿದವರು ಕುಮಾರಸ್ವಾಮಿ,,  ಹೀಗೆ ಶಿಕ್ಷಕರ  ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವ ಒಂದೇ ಒಂದು ಪಕ್ಷ ಅಂದರೆ ಅದು ಜೆಡಿಎಸ್ ಎಂದರು..

ನಾನೂ ಒಬ್ಬ ಶಿಕ್ಷಕ ಆಗಿದ್ದು ಶಿಕ್ಷಕ ಸಮೂಹದಲ್ಲಿ ಗುರ್ತಿಸಿಕೊಂಡಿದ್ದು, ಶಿಕ್ಷಕರ ಸ್ಪಂದನ, ಒಲವು ನಮ್ಮ ಪಕ್ಷಕ್ಕೆ ತುಂಬಾ ಇದೆ,, ಎರಡೂ ದೊಡ್ಡ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಇದ್ದರೂ ಕೂಡಾ ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಅದರಲ್ಲಿ ನಮ್ಮ ಪಕ್ಷ ಖಂಡಿತಾ ವಿಜಯಿಯಾಗುತ್ತೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ನ  ತಾಲೂಕು ಪದಾಧಿಕಾರಿಗಳು, ಶಿಕ್ಷಕರು, ಬಿಜಾಪೂರ, ಬಾಗಲಕೋಟೆ ಜಿಲ್ಲಾಧ್ಯಕ್ಷರು,  ಕಾರ್ಯಕರ್ತರು ಭಾಗಿಯಾಗಿದ್ದರು.


Gadi Kannadiga

Leave a Reply