This is the title of the web page
This is the title of the web page

Please assign a menu to the primary menu location under menu

Local News

ತಂದೆ ತಾಯಿಗೆ ಸಂತೋಷವನ್ನುಂಟು ಮಾಡುವ ಕೆಲಸವನ್ನು ಮಕ್ಕಳು ಮಾಡಬೇಕು :ಶಾಂತಾ ಆಚಾರ್ಯ


ಬೆಳಗಾವಿ ೮:- ನಗರದ ಪ್ರಯತ್ನ ಸಂಘದವರು ಕ್ಯಾಂಪ್‌ನಲ್ಲಿರುವ ಎನ್. ಎಸ್. ಪೈ ಶಾಲೆಯಲ್ಲಿಯ ಬಡ ವಿದ್ಯಾರ್ಥೀಗಳಿಗೆ ಫೀಸ್ ತುಂಬಲು ಸಹಾಯ ಮಾಡಿದರು. ಕೊರೊನಾದಿಂದಾಗಿ ಪಾಲಕರು ಕೆಲಸ ಕಳೆದುಕೊಂಡು ಯಾವುದೇ ಆದಾಯವಿಲ್ಲದೇ ವಾರ್ಷಿಕ ಶುಲ್ಕವನ್ನು ತುಂಬಲು ಪರದಾಡುತ್ತಿದ್ದರು. ಪ್ರಯತ್ನ ಸಂಘದವರು ಸುಮಾರು ಮೂವತ್ತೆöÊದು ಸಾವಿರ ರೂಪಾಯಿಗಳನ್ನು ಕಡುಬಡವರ ಫೀಸ್ ತುಂಬಲು ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತಾ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳೊಂದಿಗೆ ತೇರ್ಘಡೆಯಾಗಿ ಪಾಲಕರ ಮನಸ್ಸಿಗೆ ಸಂತೋಷವನ್ನುಂಟು ಮಾಡಿದಾಗ ಮಾತ್ರ ನಾವು ನೀಡಿದ ದೇಣಿಗೆ ಸಾರ್ಥಕವಾಗುತ್ತದೆ ಎಂದು ಹೇಳಿದರು .
ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ರಾಧಿಕಾ ಅವರು ಮಾತನಾಡಿ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಲು ಪಾಲಕರ ಪಾತ್ರ ತುಂಬ ಮಹತ್ವದ್ದಾಗಿರುತ್ತದೆ ಆದ್ದರಿಂದ ಮಕ್ಕಳ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಬೇಕು ಎಂದು ಹೇಳಿದ ಅವರು ಪ್ರಯತ್ನ ಸಂಘವು ನೀಡಿದ ಸಹಾಯ ಹಸ್ತಕ್ಕೆ ಧನ್ಯವಾದಗಳನ್ನು ತಿಳಿಸಿದರು .
ಸಂಘದ ಸದಸ್ಯರಾದ ಸಂಗೀತಾ ಪಾಟೀಲ, ಲತಾ ಕಟ್ಟಿ, ಸುನೀತಾ ಭಟ್, ವರದ ಭಟ್, ಪದ್ಮಾ ವೇರ್ಣೇಕರ, ಅರುಣಾ ಚೌಧರಿ, ಮಂಜು ಛಬ್ಬಿ, ಸುಮಾ ಹೊಂಡದ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply