This is the title of the web page
This is the title of the web page

Please assign a menu to the primary menu location under menu

Local News

ಶರದ್ ಪವಾರ್ ಕಟ್ಟಾ ಬೆಂಬಲಿಗರೇ ಏಕನಾಥ್ ಶಿಂಧೆ ಕಡೆ ಹೋಗಿದ್ದಾರೆ: ಸಂಜಯ್ ಪಾಟೀಲ್ ಹೊಸ ಬಾಂಬ್..!


ಬೆಳಗಾವಿ: ಉದ್ಧವ್ ಠಾಕ್ರೆ ಭಾವನಾತ್ಮ ವ್ಯಕ್ತಿ. ಅವರಿಗೆ ರಾಜಕೀಯ ಗೊತ್ತಿಲ್ಲ. ಹೀಗಾಗಿ ಇದನ್ನು ಶರದ್ ಪವಾರ್ ಸರಿಯಾಗಿ ಉಪಯೋಗ ತೆಗೆದುಕೊಳ್ಳುತ್ತಿದ್ದಾರೆ. 50 ಶಾಸಕರು ಹೋದವರಲ್ಲಿ 10 ಜನ ಪಕ್ಷೇತರರು ಹೋಗಿದ್ದಾರೆ. ಅದರಲ್ಲಿ ಶರದ್ ಪವಾರ್ ಕಟ್ಟಾ ಬೆಂಬಲಿಗರೇ ಇದ್ದಾರೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರ ಬರುತ್ತಿದೆ, ಮುಖ್ಯಮಂತ್ರಿ ಆಗಬೇಕು ಎಂದು ಬಾಳಾಸಾಹೇಬ ಠಾಕ್ರೆ ಅವರ ವಿಚಾರಧಾರೆಗಳಿಗೆ ತೀಲಾಂಜಲಿ ಇಟ್ಟು ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಕೈ ಜೋಡಿಸಿದ್ದಾರೆ.

ನನ್ನ ಜೀವ ಇರೋವರೆಗೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಭಾಷಣದಲ್ಲಿ ಅದೆಷ್ಟೋ ಬಾರಿ ಬಾಳಾಸಾಹೇಬ ಠಾಕ್ರೆ ಹೇಳಿದ್ದರು. ಬಾಳಾಸಾಹೇಬ ಠಾಕ್ರೆ ಅವರು ಕಾಂಗ್ರೆಸ್ ಪಕ್ಷ ಹಾಗೂ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಟೀಕೆ ಮಾಡಿದ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ.

ಶಿವಸೇನೆ ಮತ್ತು ಬಿಜೆಪಿ ಹಿಂದುತ್ವದ ಮೇಲೆ ಇರುವ ಪಕ್ಷಗಳು. ಆದರೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಅನೈತಿಕ ಘಟಬಂಧನ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಗಜಾನನ ಕೀರ್ತಿಕರ್ ಎಂಬ ಎಂಪಿಗೆ ರೋಹಿತ್ ಪವಾರ್ ಆಫರ್ ಕೊಡುತ್ತಾರೆ. ನೀವು ಶಿವಸೇನೆಗೆ ಬನ್ನಿ ನಿಮ್ಮ ಎಲ್ಲ ಕೆಲಸ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಎಷ್ಟೋ ಶಿವಸೇನೆ ಶಾಸಕರಿಗೆ ಕಡಿಮೆ ಅನುದಾನ ಕೊಡುತ್ತಿದ್ದಾರೆ. ಈ ಕಡೆ ಅಭಿವೃದ್ಧಿಗೆ ಹಣವನ್ನು ಕೊಡುತ್ತಿಲ್ಲ, ಅತ್ತ ವಿಚಾರಧಾರೆಯನ್ನು ಮುಗಿಸುತ್ತಿದ್ದಾರೆ. ಶಿವಸೇನೆ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್, ಎನ್‍ಸಿಪಿ ಬೆಳೆಯುತ್ತಿದೆ. ಆದರೆ ಶಿವಸೇನೆ ಪಕ್ಷವನ್ನು ಮುಗಿಸುತ್ತಿದ್ದಾರೆ ಎಂದರು.50 ಜನರು ಹೋದವರು ಯಾವ ಪಕ್ಷದವರು. ಬಿಜೆಪಿಗೂ ಈ ಜಗಳಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಿಗೆ ಹೋದರೆ ಅವರನ್ನು ಬಂಧಿಸಬಹುದು. ಹೀಗಾಗಿ ಬಿಜೆಪಿ ಅಧಿಕಾರದ ರಾಜ್ಯಗಳಿಗೆ ಹೋಗಿದ್ದಾರೆ. ಸಂಜಯ್ ರಾವತ್ ಹೇಳಿಕೆ ಬಗ್ಗೆ ಸಂಜಯ್ ರಾವತ್ ನಾಟಕ ಮಾಡುತ್ತಾನೆ ಎನ್ನುವುದು ಏಕನಾಥ್ ಶಿಂಧೆಗೆ ಗೊತ್ತಿದೆ. ಏಕನಾಥ ಶಿಂಧೆ ಗ್ರೌಂಡ್ ಲೆವೆಲ್ ರಾಜಕೀಯ ಮಾಡಿದ್ದಾರೆ. ಸಂಜಯ್ ರಾವತ್ ಬ್ಯಾಕ್‍ಡೋರ್ ಎಂಟ್ರಿ ಮಾಡಿರುವ ನಾಯಕ. ಚಮಚಾಗಿರಿ ಮಾಡಿ ಇಲ್ಲಿಯವೆರೆಗೂ ಶಿವಸೇನಾದಲ್ಲಿ ಅಧಿಕಾರ ಗಿಟ್ಟಿಸಿಕೊಂಡವರು ಎಂದು ಸಂಜಯ್ ಪಾಟೀಲ್ ಕಿಡಿಕಾರಿದರು.

ನಾನು ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದವನು, ನಾನು ಕೂಡ ಒಬ್ಬ ಬಾಳಸಾಹೇಬರ ಶಿವಸೈನಿಕ. ಈಗ ನಾನು ಬಿಜೆಪಿಯಲ್ಲಿದ್ದೇನೆ. ಶಿವಸೇನೆ ಬಗ್ಗೆ ನನಗೆ ಗೊತ್ತಿರುವಷ್ಟು ಕರ್ನಾಟಕದ ಯಾರಿಗೂ ಗೊತ್ತಿಲ್ಲ. ಏಕನಾಥ ಶಿಂಧೆ ಶಿವಸೈನಿಕರ ಜೊತೆ ರಾತ್ರಿ ಹಗಲು ದುಡಿದು ಬೆಳೆದಿರುವ ನಾಯಕ. ಏಕನಾಥ್ ಶಿಂಧೆ ಅವರ ಬಗ್ಗೆ ಮಾತನಾಡಬಾರದು.

ಸಂಜಯ್ ರಾವತ್ ಆಕ್ಟಿಂಗ್ ಮಾಡುತ್ತಿದ್ದಾನೋ, ಮಾತನಾಡುತ್ತಿದ್ದಾನೋ ಗೊತ್ತಾಗೋದಿಲ್ಲ ಎಂದು ಲೇವಡಿ ಮಾಡಿದರು.

ಏಕನಾಥ್ ಶಿಂಧೆ ಬಗ್ಗೆ ಬಿಜೆಪಿಗೆ ಲವ್ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಲವ್ ಏನು..? ಮೊದಲಿನಿಂದ ಶಿವಸೇನಾ ಪಕ್ಷ ನಮ್ಮ ಜೊತೆಗೆ ಇದೆ. ವಿಚಾರಧಾರೆ ಬಿಟ್ಟು ಹೋಗಿದ್ದಿರಿ ಎಂದು ನಾವು ಬಹಳ ಸಲ ಹೇಳಿದ್ದೇವೆ. ನನ್ನ ಮನೆಯಲ್ಲಿ ನನ್ನ ಮಗ ಮನೆ ಬಿಟ್ಟು ಹೋಗಿ ವಾಪಸ್ಸು ಬರುತ್ತಾನೆ. ಯಾಕೆಂದರೆ ನನ್ನ ಮಗ ನನ್ನ ರಕ್ತ, ಸ್ವಲ್ಪ ದಾರಿ ತಪ್ಪಿದ್ದ, ಈಗ ಬರುತ್ತಿದ್ದಾನೆ. ತಿದ್ದುಪಡಿ ಮಾಡಿಕೊಂಡು ಸರಿಯಾಗಿ ನಡೆದುಕೋ ಎಂದು ಹೇಳುತ್ತಿದ್ದೇವೆ.ತಪ್ಪು ದಾರಿಯಲ್ಲಿ ಹೋಗುವ ಪಕ್ಷದ ಜೊತೆಗೆ ಉದ್ಧವ್ ಠಾಕ್ರೆ ಹೋಗಿದ್ದ. ರಾಷ್ಟ್ರವಾದಿ ಪಕ್ಷ ಬೆಳೆಸಲು ಶರದ್ ಪವಾರ್ ಉದ್ಧವ್ ಠಾಕ್ರೆ ದಾರಿ ತಪ್ಪಿಸುತ್ತಿದ್ದಾರೆ. 50 ಜನರಲ್ಲಿ ಶರದ್ ಪವಾರ್ ಕಟ್ಟಾ ಬೆಂಬಲಿಗರಿದ್ದಾರೆ. ಅವರನ್ನು ಕೇಳಿಯೇ ಅವರು ಹೋಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.


Gadi Kannadiga

Leave a Reply