This is the title of the web page
This is the title of the web page

Please assign a menu to the primary menu location under menu

State

ಶರಣಪ್ಪ ಬಾಚಲಾಪುರ ಅವರ ಸೇವೆ ಅನನ್ಯ ಶಾಸಕ ರಾಘವೇಂದ್ರ ಹಿಟ್ನಾಳ ಅಭಿಮತ


ಕೊಪಳ್ಳ, ೦೧- ಕೊಪ್ಪಳದ ಸಾಹಿತ್ಯ ಭವನದಲ್ಲಿ ದಿ: ೧೩-೦೩-೨೦೨೩ ರಂದು ಆಯೋಜಿಸಿರುವ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಶರಣಪ್ಪ ಬಾಚಲಾಪುರ ಅವರು ಸಾಹಿತ್ಯ, ರಂಗಕಲೆ ಪತ್ರಿಕಾ ಮಾದ್ಯಮದ ಸೇವೆ ಅನನ್ಯ ಎಂದು ಶಾಸಕರಾದ ರಾಘವೇಂದ್ರ ಹಿಟ್ನಾಳ ಅಭಿಮತ ವ್ಯಕ್ತ ಪಡಿಸಿದರು.
ಅವರು ಇತ್ತಿಚೀಗೆ ಬಾಚಲಾಪುರ ಅವರ ಮನೆಗೆ ತೆರಳಿ ಗೌರವ ಸನ್ಮಾನ ಗೈದು ಮಾತನಾಡುತ್ತಾ ಸರಳ, ಸಜ್ಜನ ವ್ತಕ್ತಿಯ ಆಯ್ಕೆಯಿಂದ ಸಮ್ಮೇಳನದ ಗೌರವ ಹೆಚ್ಚಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಚಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಸೋಮರಡ್ಡಿ ಅಳವಂಡಿ ಸಂತೋಷ ದೇಶಪಾಂಡೆ, ಗವಿಸಿದ್ದಪ್ಪ ಚಿನ್ನೊರು, ಲತಾ ಗವಿಸಿದ್ದಪ್ಪ ಚಿನ್ನೊರು, ಕೊಪ್ಪಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಮಚಂದ್ರಗೌಡ ಗೊಂಡಬಾಳ, ಬಸವರಜ ಶಿರಗುಪ್ಪಿ ಶೆಟ್ಟರ ,ಮಲ್ಲಿಕಾರ್ಜನ ಹ್ಯಾಟಿ, ಈಶ್ವರಪ್ಪ ದಿನ್ನಿ, ಗಿರೀಶ ಪಾನಘಂಟಿ, ಮುನೀರ ಅಹ್ಮದ್ ಸಿದ್ದಕಿ ಇತರರು ಉಪಸ್ಥಿತರಿದ್ದರು.


Leave a Reply