This is the title of the web page
This is the title of the web page

Please assign a menu to the primary menu location under menu

State

ಶರಣರ ವಚನಗಳು ಅನುಭಾವ ಸಾಹಿತ್ಯ: ಪ್ರೊ. ಶ್ರೀಕಾಂತ ಶಾನವಾಡ


ಬೆಳಗಾವಿ; ಜಗತ್ತಿನ ಯಾವ ಭಾಗ ದಲ್ಲಿಯೂ ಯಾವ ಪಂಥದಿಂದಲೂ ಯಾವ ಸಾಹಿತ್ಯ ಪ್ರಕಾರಗಳಲ್ಲೂ ಉದ್ಭವವಾಗದ ಅನುಭಾವ ಸಾಹಿತ್ಯ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಅನುಭಾವ ಸಾಹಿತ್ಯವಿದೆ.ಅನುಭಾವ ಸಾಹಿತ್ಯ ಭಕ್ತಿಯನ್ನು ಉದೇಶವಾಗಿಟ್ಟುಕೊಂಡು ಭಕ್ತಿಯ ಮೂಲ ವನ್ನು ತಿಳಸುವದರ ಮೂಲಕ ಮೂಢನಂಬಿಕೆ, ಕಂದಾಚಾರಗಳನ್ನು ಬಯಲಿಗೆ ಎಳೆದು ,ಅದರಿಂದ ಜನಸಾಮಾನ್ಯರನ್ನು ಹೊರಗೆ ತಂದು,ಅವರನ್ನು ದೇವ ಚಿತ್ತದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅನುಭಾವದ ಪ್ರಯೋಗ ಮಾಡಲಾಯಿತು. ಈ ಅನುಭಾವದ ವಿಚಾರ ಪಾಶ್ಚಾತ್ಯ ವಿಚಾರಕ್ಕೂ ಪೌರಾತ್ಯ ವಿಚಾರಕ್ಕೂ ಅಂತರವನ್ನು ಕಾಣಬಹುದು.ಪಾಶ್ಚಿಮಾತ್ಯರಲ್ಲಿ ಅನುಭಾವ ಎನ್ನುವದು ಗ್ರಂಥಕ್ಕೆ ಹಾಗೂ ವ್ಯಕ್ತಿಗೆ ಸೀಮಿತವಾದರೆ ಇಲ್ಲಿ ದೇವನಾಳುವ ಲೋಕದ ಇಡಿ ಜೀವಿಗಳಿಗೆ ಸಂಭಂದಿಸಿದ ಅನುಭಾವ ಸಾಹಿತ್ಯವಾಗಿದೆ.ಅನುಭವ ದೇಹಜನ್ಯವಾಗಿದೆ ಆದರೆ ಅನುಭಾವ ಮಾನಸಿಕ ವಾದದ್ದು ಅನುಭವ ಕ್ಷಣಿಕ, ಅನುಭಾವ ಶಾಶ್ವತ ಸುಖ ನೀಡುವದು.ಅನುಭವ ಲೌಕಿಕವಾದರೆ, ಅನುಭಾವವು ಅಲೌಕಿಕವಾದದ್ದು.ಇದನ್ನು ನಮ್ಮ ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರು ಅನುಭವದ ಅನುಭಾವವನ್ನು ಅನುಸರಿಸಿ ಆಚರಿಸುವ ಮೂಲಕ ನಮಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಸನ್ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ನಾವು ಶರಣರ ವಚನಗಳ ಆಶಯದಂತೆ ಆಚರಣೆಗೆ ತಂದು,ಇಷ್ಟಲಿಂಗವನ್ನು ಪೂಜಿಸಿ, ಜೀವನ ಹಸನಗೊಳಿಸಿ ಕೊಳ್ಳಬೇಕು ಅಂತಾ ಸೋಮವಾರ ದಿನಾಂಕ ೧೭/೦೭/೨೦೨೩ ರಂದು ಜಾಗತಿಕ ಲಿಂಗಾಯತ ಮಹಾಸಭೆಯ ಆಶ್ರಯದಲ್ಲಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ ಮಾಸಿಕ ಅನುಭಾವ ಸತ್ಸಂಗದಲ್ಲಿ ಭಾಗವಹಿಸಿ “ಅನುಭಾವ ಇಲ್ಲದ ಭಕ್ತಿ” ವಿಷಯದ ಕುರಿತ ತಮ್ಮ ವಿಶೇಷ ಉಪನ್ಯಾಸದಲ್ಲಿ ಬೆನನ್-ಸ್ಮಿತ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ಫ್ರೊ. ಶ್ರೀಕಾಂತ ಶಾನವಾಡ ಅವರು ಮೇಲಿನಂತೆ ಹೇಳಿದರು.

ಸಾನಿದ್ಯ ವಹಿಸಿದ್ದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ ಬೆಳಗಾವಿ ಅವರು ಬರುವ ಶ್ರಾವಣ ಮಾಸದಲ್ಲಿ ” ಶ್ರೀ ಗಳ ನಡೆ ಭಕ್ತರ ಕಡೆ” ಕಾರ್ಯಕ್ರಮದ ಅಂಗವಾಗಿ ಎಲ್ಲಾ ಬಡಾವಣೆ ಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡು, ಸರ್ವರಿಗೂ ರುದ್ರಾಕ್ಷಿ ಧಾರಣೆ ಮಾಡಿ ಧಾರ್ಮಿಕ ಜನಜಾಗೃತಿ ಮಾಡುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕೃತಾರ್ಥರಾಗಬೇಕು. ಶ್ರೀಮಠದಿಂದ ಆಯೋಜಿಸುವ ಸಂಸ್ಕಾರ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು.ಅಲ್ಲದೇ ಜಾಗತಿಕ ಲಿಂಗಾಯತ ಮಹಾಸಭೆಯು ಸಮಾಜಪರ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಮ್ಮ ಆಶೀವರ್ಚನ ನುಡಿಯಲ್ಲಿ ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ನ್ಯಾಯವಾದಿ ಬಸವರಾಜ ರೊಟ್ಟಿಯವರು ಮಾತನಾಡುತ್ತಾ ವೀರಶೈವ ಮಹಾಸಭೆಯ ಶ್ಯಾಮನೂರ ಶಿವಶಂಕರ ಅವರ ಲಿಂಗಾಯತ ವಿರೋಧಿ ಹೇಳಿಕೆಗಳನ್ನು ನೀಡಿದ್ದನ್ನು ಖಂಡಿಸಿದರು.ಯಾವುದೇ ಲಿಂಗಾಯತ ಮುಖಂಡರಾಗಲಿ,ಲಿಂಗಾಯತ ಸ್ವಾಮೀಜಿಗಳಾಗಲಿ ಧರ್ಮವನ್ನು ಒಡೆದಿಲ್ಲ. ಇಂತಹ ಹೇಳಿಕೆಗಳನ್ನು ಜಾಗತಿ ಲಿಂಗಾಯತ ಮಹಾಸಭೆಯು ಖಂಡಿಸುತ್ತದೆ ಅಂತಾ ಹೇಳಿದರು.ಶರಣೆ ಶಕುಂತಲಾ ಮಲ್ಲಿಕಾರ್ಜುನ ಹೂಗಾರ ಅವರು ಷಟ್ ಸ್ಥಲ ಧ್ವಜಾರೋಹಣ ಹಾಗೂ ಪ್ರಸಾದ ದಾಸೋಹ ಸೇವೆ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಶೋಕ ಮಳಗಲಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ಚಂದ್ರಪ್ಪ ಬೂದಿಹಾಳ ನಿರೂಪಣೆ ಮಾಡಿ,ಶರಣು ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಬಡಾವಣೆಯ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.


Leave a Reply