This is the title of the web page
This is the title of the web page

Please assign a menu to the primary menu location under menu

Local News

ಹಣ ಹೆಂಡ ಹಂಚದೇ ಚುನಾವಣೆಯಲ್ಲಿ ಗೆಲ್ಲಿ ಶಶಿಕಾಂತ ನಾಯಿಕ ಶಾಸಕರಿಗೆ ಸವಾಲು


ಯಮಕನಮರಡಿ: ಹಿಂದೂ ಧರ್ಮದ ಸಂಪ್ರದಯ ಪರಪಂರೆ ಸಂಸ್ಕೃತಿಯು ತನ್ನದೇ ಆದ ವೈಶಿಷ್ಟ ಹೊಂದಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ ಯಮಕನಮರಡಿ ಶಾಸಕರು ಹಿಂದೂ ಧರ್ಮವನ್ನು ಕಡೆಗಣಿಸಿ ಮಾತನಾಡಿದ್ದು ಖಂಡ£Ãಯವಾದದು ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.
ಅವರು ಬುಧವಾರ ದಿ. ೦೮ ರಂದು ಚಿಕಲದಿ£್ನಯ ಶ್ರೀ ಕಮಲಾದೇವಿ ದೇವಸ್ಥಾನದಲ್ಲಿ ಬಿಜೆಪಿ ಜಿಲ್ಲಾ ಎಸ್.ಟಿ ಮೊರ್ಚಾದ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಾಸಕರು ೧೫ ವರ್ಷಗಳಾದರೂ ಕ್ಷೇತ್ರದಲ್ಲಿ £Ãರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ರಸ್ತುಂಪೂರ ಎರಡನೇ ಹಂತದಿಂದ ಮಾವನೂರ ಗ್ರಾಮದವರೆಗೆ ಇನ್ನೂವರೆಗೆ £Ãರು ತಲುಪಿಲ್ಲ ಈ ಭಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕರು ತಮ್ಮ ಸಾಧನೆಗಳನ್ನು ನಮ್ಮೊಂದಿಗೆ ಒಂದೇ ವೇದಿಕೆಗೆ ಬಂದು ಚರ್ಚಿಸಲು ಚುನವಣೆಯಲ್ಲಿ ಹಣ ಹೆಂಡ ಹಂಚದೇ ಗೆಲ್ಲಬೇಕೆಂದು ಮಾಜಿ ಸಚಿವ ಶಶಿಕಾಂತ ನಾಯಿಕ ಶಾಸಕರಿಗೆ ಸವಾಲು ಹಾಕಿದರು. ಶಾಸಕ ಸತೀಶ ಜಾರಕಿಹೊಳಿಯವರುಮಾತ್ರ ಪರಿಶಿಷ್ಠ ಪಂಗಡದ ಜನಾಂಗದ ಪ್ರಭಾವಿ ನಾಯಕರಲ್ಲ ಬಸವರಾಜ ಹುಂದ್ರಿಯವರು ಕೂಡಾ ಪರಿಶಿಷ್ಠ ಪಂಗಡದ ಒಬ್ಬ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ ಮಾತನಾಡಿ ಯಮಕನಮರಡಿ ಮತಕ್ಷೇತ್ರವು ಎಸ್.ಟಿ. ಜನಾಂಗದಿಂದ ಕೂಡಿದ್ದು, ಎಸ್.ಟಿ ಜನಾಂಗದ ಅಭಿವೃದ್ದಿಗಾಗಿ ಚಿಂತನೆ ಮಂಥನೆ ಮಾಡಲು ಬರುವ ಸೋಮವಾರ ದಿ. ೧೩ ರಂದು ಸಂಜೆ ಶಹಾಬಂದರ ಸರ್ಕಲ್ ಬಳಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸಾರಿಗೆ ಸಚಿವರಾದ ಶ್ರೀರಾಮುಲು ಬಿಜೆಪಿ ರಜ್ಯ ಉಪಾಧ್ಯಕ್ಷ, ಸಮಾವೇಶಗಳ ಸಂಚಾಲಕರಾದ ವಿಜಯಂದ್ರ, ಮಾಜಿ ಡಿಸಿಎಂ ಲಕ್ಷö್ಮಣ ಸವದಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ ಸೇರಿದಂತೆ ಜಿಲ್ಲೆಯ ಬಿಜೆಪಿ ಪ್ರಮುಖರು ಈ ಸಮಾವೇಶದಲ್ಲಿ ಪಾಲ್ಗೊಂಡು ಮಾರ್ಗದರ್ಶನ £Ãಡಲಿದ್ದಾರೆ.
ಈ ಸಮಾವೇಶದಲ್ಲಿ ಸುಮಾರು ೧೦ ಸಾವಿರ ಜನ ಸೇರುವ £ರೀಕ್ಷೆಯಿದ್ದು, ಮುಂಬರುವ ಚುನಾವಣೆ ದೃಷ್ಠಿಯಿಂದ ಈ ಸಮಾವೇಶವು ಮಹತ್ವದ್ದಾಗಿದೆ ಎಂದು ಬಸವರಾಜ ಹುಂದ್ರಿ ಹೇಳಿದರು.
ರಾಜ್ಯ ಕರಕುಶಲ £ಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಬಿಜೆಪಿ ಮುಖಂಡ ರವಿ ಹಂಜಿ ಮಾತನಾಡಿದರು. ಸಭೆಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಯಮಕನಮರಡಿ ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳ ಅಧ್ಯಕ್ಷ ಅಪ್ಪಯ್ಯ ಜಾಜರಿ, ಸಿದ್ದಲಿಂಗ ಸಿದ್ದಗೌಡರ, ಅಯೂಬಖಾನ ಒಂಟಿಗಾರ, ಕೆಂಚಗೌಡ ಪಾಟೀಲ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಯಲ್ಲಪ್ಪ ಗಡಕರಿ, ಗುರು ಹಿರೇಮಠ, ಬಸವಣ್ಣಿ ಲಂಕೆಪ್ಪಗೋಳ, ಲಕ್ಕಪ್ಪ ಕರಗುಪ್ಪಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply