This is the title of the web page
This is the title of the web page

Please assign a menu to the primary menu location under menu

State

ಕುರಿ / ಮೇಕೆ ಸಾಗಾಣಿಕೆ ತರಬೇತಿ


ಗದಗ ಎಪ್ರಿಲ್ ೧೦: ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಧಾರವಾಡದಲ್ಲಿ ಎಪ್ರಿಲ್ ೨೦೨೩ ರಿಂದ ಮಾರ್ಚ ೨೦೨೪ ರವರೆಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಧಾರವಾಡ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳ ರೈತ/ ರೈತ ಮಹಿಳೆಯರಿಗೆ ಎರಡು ದಿನಗಳ ಅವಧಿಯ ತಂಡವಾರು ಉಚಿತವಾಗಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ/ ಮೇಕೆ ಸಾಕಾಣಿಕೆಯ ತರಬೇತಿಯನ್ನು ನೀಡಲಾಗುತ್ತದೆ.ಆಸಕ್ತಿಯುಳ್ಳ ರೈತರು ತಮ್ಮ ಹೆಸರನ್ನು ಎಸ್.ಎಂ.ಎಸ್. ಸಂದೇಶದ ಮೂಲಕ/ ಕಚೇರಿ ದೂರವಾಣಿ ಕರೆ ಮುಖಾಂತರ ಅಥವಾ ಮುದ್ದಾಂ ಭೇಟಿ ನೀಡಿ ತಮ್ಮ ಹೆಸರನ್ನು ಬೆ.೧೦.೧೫ ರಿಂದ ಸಂಜೆ ೫.೧೫ ರವರೆಗ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೬-೨೪೪೩೭೪೩, ಮೊಬೈಲ್ ಸಂಖ್ಯೆ ೯೫೯೧೦೨೪೪೯೯/ ೮೬೧೮೦೨೨೧೦೮ ಸಂಪರ್ಕಿಸಬಹುದಾಗಿದೆ.

 


Leave a Reply