This is the title of the web page
This is the title of the web page

Please assign a menu to the primary menu location under menu

Local News

ಐಡಿ ಕಾರ್ಡ್ ಇಲ್ಲದೇ ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಟ್ಟ ನಿರಾಣಿ ಪಿಎಗೆ ಜಿಲ್ಲಾಧಿಕಾರಿ ಹಿಗ್ಗಾಮುಗ್ಗಾ ತರಾಟೆ


ಬೆಳಗಾವಿ : ನಗರದ ಜ್ಯೋತಿ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಚೀಟಿ ಇಲ್ಲದೆ ಆಗಮಿಸಿದ ಹನುಮಂತ ನಿರಾಣಿ ಆಪ್ತ ಸಹಾಯಕನಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಶಿಕ್ಷಕರ ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಇಲ್ಲದೆ ಆಗಮಿಸಿದ ಬಿಜೆಪಿ ಅಭ್ಯರ್ಥಿಯ ಆಪ್ತಸಹಾಯಕ ಗುರು ಎಂಬುವವರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತರಾಟೆಗೆ ತಗೊಂಡು ಹೊರ ಕಳಿಸಿದ್ದಾರೆ.

ಇತ್ತ ನಿರಾಣಿ ಆಪ್ತ ಸಹಾಯಕ ಬಂದ ದಾರಿಗೆ ಸುಂಕವಿಲ್ಲದೇ ಹೊರ ನಡೆದರು.


Gadi Kannadiga

Leave a Reply