ಬೆಳಗಾವಿ, ಏಪ್ರಿಲ್ 29: ಕರ್ನಾಟಕ ಕ್ಷತ್ರಿಯ ಪರಿಷತ್ (KKMP), ಬೆಳಗಾವಿ ವತಿಯಿಂದ ಇವತ್ತಂದು ಶಿವಛತ್ರಪತಿ ಜಯಂತಿಯನ್ನು ಸಂಪ್ರದಾಯಾನುಸಾರ ಭಕ್ತಿ ಭಾವದಿಂದ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಸೊನಾಲಿ ಸರ್ಣೋಬಟ್ (KKMP ಬೆಳಗಾವಿ ಜಿಲ್ಲೆ ಮಹಿಳಾ ಅಧ್ಯಕ್ಷೆ) ಹಾಗೂ ದಿಲೀಪ್ ಪವಾರ್ (KKMP ಬೆಳಗಾವಿ ಜಿಲ್ಲೆ ಕಾರ್ಯಾಧ್ಯಕ್ಷರು) ಅವರು ನಾಯಕತ್ವ ವಹಿಸಿದರು. ಜೊತೆಗೆ ಡಿ.ಬಿ. ಪಾಟೀಲ, ಬಸವರಾಜ್ ಮ್ಯಾಗೋಟಿ, ಸಂಜಯ ಭೋಸಲೆ, ಸತೀಶ್ ಬಾಚಿಕರ್, ರೋಹನ್ ಕಡಮ್, ಚಂಗಪ್ಪ ಪಾಟೀಲ, ರಾಹುಲ್ ಪವಾರ್, ಕಿರಣ್ ಕವಲೆ, ಅಡ್ವೊ. ಬೆಳಗೋಜಿ, ಗೀತಾ ಚೌಗುಲೆ, ಕಂಚನ್ ಚೌಗುಲೆ ಮತ್ತು ವಿದ್ಯಾ ಸರ್ಣೋಬಟ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಹಾಗೂ ಪರಾಕ್ರಮವನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು. ಅವರ ಇತಿಹಾಸವನ್ನು ಪ್ರತಿಬಿಂಬಿಸುವ ಭಾಷಣಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿವೆ.