ಬೆಳಗಾವಿ: ಭಾರತೀ ಜನತಾ ಪಕ್ಷದ ಬೆಳಗಾವಿ ಜಿಲ್ಲೆಯ ನೂತನ ಮಾಧ್ಯಮ ವಕ್ತಾರರನ್ನಾಗಿ ಶಿವಲಿಂಗಪ್ರಭು ಹೂಗಾರ್ ಅವರನ್ನು ಆಯ್ಕೆ ಮಾಡಲಾಯಿತು.
ನಿಷ್ಟಾವಂತ ಪಕ್ಷಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತ ಬಂದಿದ್ದ ಶಿವಲಿಂಗಪ್ರಭು ಹೂಗಾರ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದ್ದು ಬಿಜೆಪಿಯು ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದೆ.
ಪಕ್ಷ ಸಂಘಟನೆ ಗೋಸ್ಕರ ನಿಷ್ಠಾವಂತ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದ್ದು ಪಕ್ಷಕ್ಕೆ ಕಾರ್ಯಕರ್ತರಲ್ಲಿ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಬೆಳಗಾವಿ ಭಾರತೀಯ ಜನತಾ ಪಕ್ಷ ಮಹಾನಗರ ಅಧ್ಯಕ್ಷ ಶಶೀಕಾಂತ ಪಾಟೀಲ್ ಅವರು ಆಶ್ಚರ್ಯಕರ ನಿರ್ಣಯ ತೆಗೆದುಕೊಂಡಿರುವುದ ರಿಂದ ಕಾರ್ಯಕರ್ತರಲಿ ಉತ್ಸಾಹ ತುಂಬಿದೆ.
ಶಿವಲಿಂಗ ಪ್ರಭು ಹೂಗಾರ್ ಕಳೆದ ದಶಕಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೀಗ ಪಕ್ಷ ಸಹಜವಾಗಿ ಗುರುತಿಸಿ ಹೊಸ ಜವಾಬ್ದಾರಿಯನ್ನು ನೀಡಿದೆ. ಹಿಂದೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಕೋಷ್ಟಪ್ರ ಮುಖರಾಗಿ ಕಾರ್ಯನಿರ್ವಹಿಸಿದ್ದು ಇವರ ಸಂಘಟನೆಯ ಚತುರತೆಯನ್ನು ಗುರುತಿಸಿದೆ .
ಪ್ರಭು ಹೂಗಾರ ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಸಕ್ರಿಯ ಸಹಭಾಗಿತ್ವ ದಿಂದ ಪಕ್ಷದ ಅಭ್ಯರ್ಥಿಗಳನ್ನು ವಿಜಯಶಾಲಿಯಾಗಿ ಮಾಡಿರುವ ಇವರ ಚುನಾವಣೆಯಲ್ಲಿ ತಂತ್ರಗಾರಿಕೆಯು
ಫಲ ಪ್ರದಾಯಕವಾಗಿದೆ ಅದರಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಮತ್ತಷ್ಟು ಬಲ ಗೊಳ್ಳಲಿದೆ ಎಂದು ನಾಯಕರುಗಳ ಭರವಸೆ ವ್ಯಕ್ತಪಡಿಸಿದ್ದಾರೆ