This is the title of the web page
This is the title of the web page

Please assign a menu to the primary menu location under menu

Local News

ಒಳ್ಳೆಯ ಮನಸ್ಸಿನಿಂದ ಎನೆಲ್ಲವನ್ನೂ ಸಾಧಿಸಬಹುದು : ಶೋಭಾತಾಯಿ ಹಿರೇಮಠ


ಸವದತ್ತಿ ೩೦ : ಮನುಷ್ಯರಾದ ನಾವು ಮನಸ್ಸನ್ನು ಹಿಡಿತದಲ್ಲಿಟ್ಟು ಕೊಂಡು ಪ್ರಾಂಜಲ ಮನಸ್ಸನ್ನು ಮಾಡಿ ಪ್ರಿತಿಯಿಂದ ಕೊಡಿದ ಮನಸ್ಸನ್ನು ಮಾಡಿಕೊಂಡು ಮಾತನಾಡಿದರೆ ಆಗಲಾರದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬಹುದು ಒಳ್ಳೆಯ ಪ್ರಿತಿಯ ಮನಸ್ಸನ್ನು ಎಲ್ಲರೂ ತಮ್ಮಲ್ಲಿ ಅಳವಡಿಸಿಕೊಳ್ಳಬೇಕು, ಹಿಂದಿನ ನಮ್ಮ ಎಲ್ಲ ವೀರ ಮಹನಿಯರು ಸಾಧು ಸಂತ ಮಹಾಂತರು ಒಳ್ಳೆಯ ಗಟ್ಟಿಯಾದ ಮನಸ್ಸುಮಾಡಿ ತಾವು ಅಂದುಕೊಂಡಂತಹ ಸಾಧಿಸಿದವರು ಆದ್ದರಿಂದ ಓಳ್ಳೇಯ ಮನಸ್ಸಿನಿಂದ ಎನೇಲ್ಲವನ್ನೂ ಸಾಧಿಸಬಹುದು ಎಂದು ನಿಡಸೋಸಿಯ ಮಾತೋಶ್ರೀ ಶೋಭಾತಾಯಿ ಹಿರೇಮಠ ಮಾತನಾಡಿದರು
ಅವರು ಪಟ್ಟಣದ ಮೂಲಿಮಠದ ಲಿಂಗೈಕ್ಯ ಬಸವಲಿಂಗ ಶಿವಾಚಾರ್ಯರರ ಪುಣ್ಯ ಸ್ಮರಣೋತ್ಸವದ ಎರಡನೇಯದ ಆಧ್ಯಾತ್ಮೀಕ ಪ್ರವಚನದಲ್ಲಿ ಮಾತನಾಡಿದರು
ನಂತರ ರಾಜಾರಾಮಮಠದ ಗಂಗಾಧರ ಧಿಕ್ಷೀತರು ಸಾನಿಧ್ಯ ವಹಿಸಿ ಮಾತನಾಡಿ ಮನಸ್ಸಿದ್ದರೆ ಮಾರ್ಗ ಎಂಬಂತೆ ಓಳ್ಳೆಯ ಮನಸ್ಸು ಇದ್ದವರು ದಾನದರ್ಮ ತನು ಮನ ದಿಂದ ಇರುವ ಮನಸ್ಸುಗಳು ಇಂತಹ ಆಧ್ಯಾತ್ಮಿಕ ಪ್ರವಚನಗಳಲ್ಲಿ ಬಾಗವಹಿಸುವರು ಎಂದರು
ಮೂಲಿಮಠದ ಮಲ್ಲಿಕಾರ್ಜುನ ಸ್ವಾಮಿಜಿಗಳು ನೇತೃತ್ವ ವಹಿಸಿ ಮಾತನಾಡಿ ಸಂಸಾರೆಂಬುವುದು ದೀರ್ಘವಾದ ರೋಗ ಆರೋಗಕ್ಕೆ ಔಷಧಿಗೆ ಮಠಗಳಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಎಲ್ಲ ರೋಗಗಳೊ ದೂರವಾಗುತ್ತವೆ ಎಂದರುನಂತರ ಯವಧುರಿಣರಾದ ಸೌರಭ ಚೋಪ್ರಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನನ್ನ ತಂದೆಯವರ ಆಶಯದಂತೆ ನಾನೂ ಕೊಡಾ ಸಮಾಜ ಸೇವೆ ಮಾಡುವ ಆಶಯವಿಟ್ಟುಕೊಂಡಿರುವೆ ಇಂತಹ ಆಧ್ಯಾತ್ಮೀಕ ಪ್ರವಚನಗಳು ಯುವಕರಿಗೆ ಸನ್ಮಾರ್ಗದಲ್ಲಿ ಸಾಗಲು ಮಾರ್ಗದರ್ಶನ ನಿಡುತ್ತವೆ ಎಂದರು. ಚೀದಂಬರೇಶ್ವರ ದೇವಸ್ಥಾನದ ಪ್ರಸನ್ನ ಧಿಕ್ಷೀತರು. ಹೊಸಮಠದ ಶಾಂತವೀರ
ಬಿದರಿ ಕಲ್ಮಠದ ಶಿವಲಿಂಗಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು ಸ್ವಾಮಿಜಿ, ಗೊರವನಕೊಳ್ಳದ ಶಿವಾನಂದ ಸ್ವಾಮಿಜಿಗಳು, ಮಾತನಾಡಿದರು ಅತಿಥಿಗಳಾಗಿ ಆಯ್ ಪಿ ಪಾಟೀಲ, ನ್ಯಾಯವಾದಿ ಸಿ ವಿ ಸಾಂಬಯ್ಯನವರಮಠ, ಈರಯ್ಯ ಕಾಂತಿಮಠ, ವೇದಿಕೆಮೇಲೆ ಉಪಸ್ಥಿತರಿದ್ದರು ನಂತರ ಮಠದ ಆದ್ಯಾತ್ಮಿಕ ಪ್ರವಚನ ಈ ಕಾರ್ಯಕ್ರಮಕ್ಕೆ ತನು ಮನ ಧನ ದಿಂದ ಸಹಾಯ ಮಾಡಿದ ಸೌರಭ ಚೋಪ್ರಾ, ಮಹಾನಿಂಗಜ್ಜನವರು ನ್ಯಾಯವಾದಿ ಸಿ ವಿ ಸಾಂಬಯ್ಯನವರಮಠ.ರವರನ್ನು ಮೂಲಿಮಠದ ಸ್ವಾಮಿಜಿಗಳು ಸನ್ಮಾನಿಸಿ ಗೌರವಿಸಿದರು ಕಾರ್ಯಕ್ರಮದ ಪ್ರಾರಂಭದಲ್ಲಿ ಜ್ಞಾನಗಂಗಾ ಅಕ್ಕನ ಬಳಗದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ವಿಜಯ ಹಿರೇಮಠ ಹಾಗೂ ಶಿಕ್ಷಕರಾದ ಎಮ್ ಪಿ ಪಾಟೀಲ ಕಾರ್ಯಕ್ರಮ ನೀರೂಪಿಸಿ ವಂದನಾರ್ಪಣೆ ಮಾಡಿದರು

 


Leave a Reply