ಬೆಳಗಾವಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನವು ಬೆಳಗಾವಿ ನಗರದ ಗಚೇಶಪುರ ರಸ್ತೆಯಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಪಕ್ಕದಲ್ಲಿ ಸಿಟಿ ಸರ್ವೆ ನಂ 4125/1ಂ ನೀವೆಶನದಲ್ಲಿ ನಿಮಾರ್ಣವಾಗುತ್ತಿದ್ದು, ಇದರಲ್ಲಿಯ ಮಳಿಗೆಗಳನ್ನು ಬಾಡಿಗೆಗೆ ಕೊಡುವುದಿದೆ. ಆಸಕ್ತರು ಇದೇ ಫೆಬ್ರುವರಿ 4 ರೊಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಪ್ರತಿ ಮಳಿಗೆಯು 15*20 ಅಳತೆಯನ್ನು ಹೊಂದಿದ್ದು, ಮುಖ್ಯ ರಸ್ತೆಯಿಂದ 16 ಅಡಿಯವರೆಗೆ ಸುಸಜ್ಜಿತ ಕಾಂಕ್ರೀಟ್ ನೆಲಹಾಸು ಹೊಂದಿದೆ. ರಕ್ತಭಂಡಾರ,
ಮೆಡಿಕಲ್ ಲ್ಯಾಬ್ ಹೋಲ್ಸೆಲ್ ಔಷಧಿ ವಿತರಕರು, ಔಷಧಿ/ಜನ ಔಷಧಿ ಮಾರಾಟಗಾರು, ಸ್ಕ್ಯಾನಿಂಗ್ ಸೆಂಟರ್ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬAಧಿಸಿದ ಕೆಲಸಕಾರ್ಯಗಳಿಗೆ ಪ್ರಾಶಸ್ಯ ನೀಡಲಾಗುವುದು. ವಿಕಲಚೇತನ ಅರ್ಜಿದಾರರಿಗೆ ಆದ್ಯತೆ ನೀಡಲಾಗವುದು.
ಅರ್ಜಿಗಳನ್ನು ಕಾರ್ಯದರ್ಶಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಬೆಳಗಾವಿ ಬಿಮ್ಸ್ (ಸಿವಿಲ್) ಆಸ್ಪತ್ರೆ ಆವರಣ ಜೆನರಿಕ್ ಮೆಡಿಶಿನ್ ಪಕ್ಕದಲ್ಲಿ ಬೆಳಗಾವಿ ಮೋಬೈಲ್ ನಂ: 9480398025 ಈ ವಿಳಾಸಕ್ಕೆ ಸಲ್ಲಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.