This is the title of the web page
This is the title of the web page

Please assign a menu to the primary menu location under menu

Local News

ರಂಗಸಂಪದ ಹಾಗೂ ಹಾಸ್ಯಕೂಟದವರಿಂದ ಕಿರುನಾಟಕ ಸ್ಪರ್ಧೆ


ಬೆಳಗಾವಿ ೧೦- ರಂಗಸಂಪದ ಬೆಳಗಾವಿ ಮತ್ತು ಹಾಸ್ಯಕೂಟ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿರು ನಾಟಕ ಸ್ಪರ್ಧೆ ನಮ್ಮ ಬೆಳಗಾವಿಯ ನುರಿತ ಮತ್ತು ಹೊಸ ಕಲಾವಿದರಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಇದೇ ತಿಂಗಳ ದಿ.೨೨ ಶನಿವಾರ ಸಂಜೆ ಸರಿಯಾಗಿ ೪.೦೦ ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಹಾಸ್ಯ ಕಿರುನಾಟಕ/ಪ್ರಹಸನ ಸ್ಪರ್ಧೆ ಏರ್ಪಡಿಸಿದ್ದಾರೆ.
ಸ್ಪರ್ಧೆಯ ನಿಯಮಗಳೆಂದರೆ *ಈ ಸ್ಫರ್ಧೆಯಲ್ಲಿ ಯಾರೂ ಭಾಗವಹಿಸಬಹುದು. *ಕನಿಷ್ಟ ೨ ಮತ್ತು ಗರಿಷ್ಠ ೫ ಜನ ಕಲಾವಿದರು ಮಾತ್ರ ಇರುಬೇಕು * ಕನಿಷ್ಠ ೫ ಮತ್ತು ಗರಿಷ್ಠ ೧೦ ನಿಮಿಷಗಳಿರಬೇಕು. * ವಿಷಯ ಮತ್ತು ಭಾವ ತಂಡ ನಿರ್ಧರಿಸಬಹುದು. *ಮೇಕಪ್ ಮತ್ತು ಕಾಸ್ಟೂಮ್ ತಂಡ ನಿರ್ಧರಿಸಬಹುದು. * ಮೂರು ಮೈಕ್ ಮತ್ತು ಒಂದು ಫ್ಲಡ್ ಲಾಯಿಟ ವ್ಯವಸ್ಥೆ ಇರುವದು. ದಿ.೨೦ ಜುಲೈ ಸಂಜೆ ೬.೦೦ ರ ಒಳಗೆ ತಂಡದ ಸದಸ್ಯರ ಹೆಸರು ಮತ್ತು ಮೊಬೈಲ್ ನಂಬರ ಸಹಿತ ರೂ ೨೦೦.೦೦ ಪ್ರವೇಶ ಶುಲ್ಕದೊಂದಿಗೆ ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷರು ರಂಗಸಂಪದ ಬೆಳಗಾವಿ ಇವರ ಮೊಬೈಲ್ ನಂ.೯೮೪೫೦೨೫೬೩೮ ವಾಟ್ಸಪ್ ಮೂಲಕ ಕಳಿಸಬೇಕು.
ಮೊದಲು ಹೆಸರನ್ನು ನೋಂದಾಯಿಸಿಕೊಳ್ಳುವ ೧೨ ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಪ್ರಥಮ. ರೂ. ೫೦೦೦.೦೦, ದ್ವಿತೀಯ. ರೂ. ೩೦೦೦.೦೦ ಮತ್ತು ತೃತೀಯ. ರೂ. ೨೦೦೦.೦೦ ಹೀಗೆ ಮೂರು ನಗದು ಬಹುಮಾನ ನೀಡಲಾಗುವುದು. vಸ್ಪರ್ಧೆಯ ನಿಯಮಗಳನ್ನು ಬದಲಾಯಿಸುವ ಅಧಿಕಾರ ಸ್ಪರ್ಧೆಯ ಆಯೋಜಕರಿಗೆ ಇರುವದು. ಸ್ಫರ್ಧೆಯ ಎಲ್ಲಾ ಕಿರು ನಾಟಕಗಳನ್ನು ರಂಗಸಂಪದ ಫೇಸಬುಕ್ ಗುಂಪಿನಲ್ಲಿ ಲೈವ್ ತೋರಿಸಲಾಗುವದು. ಆಯೋಜಕರ ಮತ್ತು ನಿರ್ಣಾಯಕರ ನಿರ್ಣಯ ಅಂತಿಮ. ಹೆಚ್ಚಿನ ವಿವರಗಳಿಗಾಗಿ ಡಾ.ಅರವಿಂದ ಕುಲಕರ್ಣಿ ಅಧ್ಯಕ್ಷರು ರಂಗಸಂಪದ ಬೆಳಗಾವಿ ಹಾಗೂ ಶ್ರೀ.ಮಧುಕರ ಗುಂಡೇನಟ್ಟಿ. ಸಂಚಾಲಕರು ಹಾಸ್ಯಕೂಟ ಬೆಳಗಾವಿ ೯೮೪೫೦೨೫೬೩೮/೯೪೪೮೯೪೭೩೪೩/ ೯೪೪೮೦೯೩೫೮೯ ಕರೆಮಾಡಿ.


Leave a Reply