This is the title of the web page
This is the title of the web page

Please assign a menu to the primary menu location under menu

Local News

ಶ್ರಮಿಕ್ ನಿವಾಸ್ ಶಿಲಾನ್ಯಾಸ ಸಮಾರಂಭ ಕಾರ್ಮಿರಿಗೆ ಸಹಾಯಧನ ಚೆಕ್ ವಿತರಿಸಿದ ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ


ಬೆಳಗಾವಿ, ಡಿ.೩೦ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತಾತ್ಕಾಲಿಕ ವಸತಿ ಸಮುಚ್ಛಯದ (ಶ್ರಮಿಕ್ ನಿವಾಸ) ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಸಮಾರಂಭದ ಕಾರ್ಯಕ್ರಮ ಗುರುವಾರ (ಡಿ.೨೯) ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ್ ಹೆಬ್ಬಾರ ಅವರು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಕಾರ್ಮಿಕ ಇಲಾಖೆಯಿಂದ ವಿವಿಧ ವರ್ಗದ ಕಾರ್ಮಿಕರುಗಳಿಗೆ ಮಂಡಳಿಯಿಂದ ನೀಡಿರುವ ಉಪಕರಣಗಳು ಫಲಾನುಭವಿಗಳಿಗೆ ತುಂಬಾ ಉಪಯೋಗಕಾರಿಯಾಗಿರುತ್ತವೆ ಎಂದು ತಿಳಿಸಿದರು.
ಕಾರ್ಮಿಕ ಸಚಿವರಾದ ಅರಬೈಲ್ ಶಿವರಾಮ್ ಹೆಬ್ಬಾರ ಅವರು ಮಾತನಾಡಿ, ಅಂತರಾಜ್ಯ ಮತ್ತು ಅಂತರ್ ಜಿಲ್ಲೆಯ ವಲಸೆ ನಿರ್ಮಾಣ ಕಾರ್ಮಿಕರಿಗೆ ಸೂರು ಒದಗಿಸಿಕೊಡಲು ‘ಶ್ರಮಿಕ್ ನಿವಾಸ್’ ತಾತ್ಕಾಲಿಕ ವಸತಿ ಯೋಜನೆಯನ್ನು ಬೆಳಗಾವಿಯ ಬಿ.ಕೆ. ಕಂಗ್ರಾಳಿಯಲ್ಲಿ ನಿರ್ಮಿಸುತ್ತಿದ್ದು, ಹಲವಾರು ನಿರ್ಮಾಣ ಕಾರ್ಮಿಕರುಗಳಿಗೆ ಮತ್ತು ಅವರ ಅವಲಂಬಿತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು
ಪೇಂಟರ್, ಇಲೆಕ್ಟ್ರೀಷಿಯನ್ ಮತ್ತು ಶಾಲಾ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಮಾಲೀಕರು ಪರಿಶಿಷ್ಠ ಜಾತಿ/ ಪರಿಶಿಷ್ಠ ವರ್ಗದ ನೌಕರರುಗಳನ್ನು ನೇಮಿಸಿಕೊಳ್ಳಲು ಉತ್ತೇಜನಕಾರಿಯಾದ “ಆಶಾದೀಪ” ಯೋಜನೆಯಡಿ ಮೆ: ವೇಗಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ, ವಿ ಆರ್ ಎಲ್ ಲಾಜಿಸ್ಟಿಕ್ಸ್ ಸಂಸ್ಥೆಗಳಿಗೆ ರೂ. ೩೦ ಲಕ್ಷದ ಸಹಾಯಧನದ ಚೆಕ್‌ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ್, ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷ, ಮಂಡಳಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗುರುಪ್ರಸಾದ ಹಾಜರಿದ್ದರು. ಬೆಳಗಾವಿ ಪ್ರಾದೇಶಿಕದ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಅಧಿಕಾರಿ ತರನ್ನುಂ ಅವರು ವಂದಿಸಿದರು.


Leave a Reply