ಬೆಳಗಾವಿ ೧೪- ಪರಮ ಪೂಜ್ಯ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ದೇಶದಾದ್ಯಂತ ಶ್ರೀ ಮದ್ಭಗವದ್ಗೀತಾ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ ರಾಜ್ಯದ ಅನೇಕ ನಗರಗಳಲ್ಲಿ ಏಕಕಾಲದಲ್ಲಿ ಭಗವದ್ಗೀತೆಯ ೧೮ ಅಧ್ಯಾಯಗಳ ಪ್ರವಚನವನ್ನು ಆಯೋಜನೆ ಮಾಡಲಾಗಿದೆ.
ಇದೇ ದಿ. ೧೫ ರಿಂದ ೧೭ ನೇ ತಾರೀಖನವರೆಗೆ ತಿಳಕವಾಡಿ ಆರ್.ಪಿ.ಡಿ. ಕಾಲೇಜ್ ಎದುರಿಗಿರುವ ಶ್ರೀ ಕ್ರಷ್ಣ ಮಠದಲ್ಲಿ ಸಾ. ೬:೩೦ ರಿಂದ ೮ ಗಂಟೆಯವರೆಗೆ ಶ್ರೀಉತ್ತರಾಧಿ ಮಠ, ಧರ್ಮಜ್ಞಾನ ವಾಹಿನೀ ಮತ್ತು ವಿಶ್ವಮಧ್ವ ಮಹಾ ಪರಿಷತ್ ಆಶ್ರಯದಲ್ಲಿ ಶ್ರೀಮಧ್ಬಗವದ್ಗೀತಾ ಅಭಿಯಾನವು ಮಹಾನಗರದಲ್ಲಿ ೧೮ ತಿಂಗಳುಗಳ ಕಾಲ ಬೆಳಗಾವಿಗಯ ವಿವಿಧ ಬಡಾವಣೆಗಳಲ್ಲಿ ನಡೆಯಲಿದೆ.
ಮೊದಲನೆಯ ಉಪನ್ಯಾಸಕರಾಗಿ ಬೆಳಗಾವಿಯ ಪಂ. ಸಮೀರಣಾಚಾರ್ಯ ಪಾಂಗರಿ ಅವರು ಆಗಮಿಸಲಿದ್ದು ಸದ್ಭಕ್ತರು ಸದುಪಯೋಗ ಪಡೆಯುವಂತೆ ಮಾಧವ ಹುಕ್ಕೇರಿ ಪ್ರಕಟೆಯಲ್ಲಿ ತಿಳಿಸಿದ್ದಾರೆ
Gadi Kannadiga > Local News > ಶ್ರೀ ಮದ್ಭಗವದ್ಗೀತಾ ಅಭಿಯಾನ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023