ಯರಗಟ್ಟಿ : ವ್ಯಸನಮುಕ್ತ ಸಮಾಜದಿಂದ ಸಮೃದ್ಧ ದೇಶ ನಿರ್ಮಾಣ ಸಾಧ್ಯ. ಹಲವಾರು ವಿಧವಾದ ವ್ಯಸನಗಳಿಂದ ಯುವಜನತೆ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿಲ್ಲ ಇದನ್ನು ಮನಗಂಡು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ವ್ಯಸನಮುಕ್ತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಅವರಿಗೆ ನಾವೆಲ್ಲರೂ ಕೈಜೋಡಿಸಿ ಅವರ ವ್ಯಸನಮುಕ್ತ ಸಮಾಜ ನಿರ್ಮಿಸುವಲ್ಲಿ ನಮ್ಮದೇ ಆದ ಕೊಡುಗೆ ನೀಡೋಣ ಎಂದು ಶ್ರೀ ಸೋಮಶೇಖರ ಮಠದಶ್ರಿ ಮುರುಘೇಂದ್ರ ಸ್ವಾಮೀಜಿ ಹೇಳಿದರು.ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಕುಮಾರೇಶ್ವರ ಆಲೂರಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ ವತಿಯಿಂದ ೧೭೧೧ನೇ ಮದ್ಯವರ್ಜನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
Àವದತ್ತಿ ಶಾಸಕ ವಿಶ್ವಾಸ ವೈದ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ವ್ಯಸನಗಳಿಂದ ಹಣದ ಜೊತೆಗೆ ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ವ್ಯಸನಗಳಿಂದ ದೂರವಿರಬಹುದು ಎಂದರು.
ಪುರಸಭೆ ಸದಸ್ಯ ಈಶ್ವರ ಕರೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರವೀಂದ್ರ ಯಲಿಗಾರ, ರಮೇಶ ಗೋಮಾಡಿ, ಅಂಬರೀಷ ಯಲಿಗಾರ, ಸುಭಾಸ ಹನಸಿ, ಹ.ಬ.ಅಸೂಟಿ, ಎಂ.ಆರ್.ಗೋಪಶೆಟ್ಟಿ, ಮುದಕಪ್ಪ ಮೇಟಿ, ಜಿ.ಬಿ.ಕುರುಬಗಟ್ಟಿ, ಗಂಗಪ್ಪ ಕುರುಬಗಟ್ಟಿ, ಮಹಾಂತೇಶ ಕಾಜಗಾರ, ಸುರೇಶ ಹಟ್ಟಿ, ಮಹಾಂತಯ್ಯ ಯರಗಟ್ಟಿಮಠ, ತಾಲೂಕಾ ಯೋಜನಾಧಿಕಾರಿ ಆಶಾ ಮಹೇಶ್, ನ್ಯಾಯವಾದಿ ಸುಭಾಸ ಗೀದಿಗೌಡ್ರ, ಡಾ. ಸದಾಶಿವ ಬಾಳಿ, ಡಾ. ಶಿವಬಸಪ್ಪ ದಂಡಗಿ, ವಿವೇಕ್ ವಿನ್ಸೆಂಟ್ ಪಾಯಸ್, ಪ್ರಾದೇಶಿಕ ವಿಭಾಗ ಯೋಜನಾಧಿಕಾರಿ ಭಾಸ್ಕರ, ರಾಜೇಶ ಮರಾಠಿ, ಫಿಲೋಮಿನಾ ಡಿಸೋಜ, ಮಹೇಶ ಕದಂ, ಪ್ರಕಾಶ ಪಾಟೀಲ, ಅಣ್ಣಪ್ಪ ಎಸ್. ಸೇರಿದಂತೆ ಇತರರು ಇದ್ದರು.
Gadi Kannadiga > Local News > ವ್ಯಸನಮುಕ್ತ ಸಮಾಜದಿಮದ ಸಮೃದ್ಧ ದೇಶ ನಿರ್ಮಾಣ : ಶ್ರೀ ಮುರುಘೇಂದ್ರ ಸ್ವಾಮೀಜಿ
ವ್ಯಸನಮುಕ್ತ ಸಮಾಜದಿಮದ ಸಮೃದ್ಧ ದೇಶ ನಿರ್ಮಾಣ : ಶ್ರೀ ಮುರುಘೇಂದ್ರ ಸ್ವಾಮೀಜಿ
Suresh23/08/2023
posted on
