ಬೆಳಗಾವಿ : ಸೈಲೆಂಟ್ ಆಗಿದ್ದ ಬೆಳಗಾವಿಯಲ್ಲಿ ಮತ್ತೆ ಬೆಂಕಿ ಹಚ್ಚುವ ಕೆಲಸಕ್ಕೆ ಎಂಇಎಸ್ ಮುಂದಾಗಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿರುವ ಗ್ರಾಫಿಕ್ ನ ವಿಡಿಯೋ ಪೋಸ್ಟ್ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.
ಎಂಇಎಸ್ ವಿವಾದಾತ್ಮಕ ವಿಡಿಯೋ ಹರಿಬಿಟ್ಟಿರುವ ನಾಡದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ. ಈತ ಫೇಸ್ ಬುಕ್ ನಲ್ಲಿ ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ಕರ್ನಾಟಕದ ಹಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿರುವಂತೆ ವಿವಾದಾತ್ಮಕ ಗ್ರಾಫಿಕ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ಮೂಲಕ ಗಡಿ ವಿವಾದಕ್ಕೆ ಎಂಇಎಸ್ ಬೆಂಕಿ ಹಚ್ಚಿದ್ದಾರೆ.