ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ.6ರಂದು ಬೆಳಗಾವಿಗೆ ಆಗಮಿಸಲಸಿ ಬಳಿಕ ಬೆಳಗಾವಿಯಲ್ಲಿ ದ್ದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಜರುಗಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೇ 6ರಂದು ಸಾಯಂಕಾಲ 6 ಗಂಟೆಗೆ ಳ ಬೆಳಗಾವಿಗೆ ಆಗಮಿಸಲಿದ್ದು ದಿ. 7 ರಂದು ಬೆಳಿಗ್ಗೆ 11 ಕ್ಕೆ ಅರಳಿಕಟ್ಟಿ ಗ್ರಾಮದ ತೋಂಟದಾರ್ಯ ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿಗಳ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಮಧ್ಯಾಹ್ನ 2ಗಂಟೆಗೆ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಹಾರುಗೊಪ್ಪ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಬೆಳಗಾವಿಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ.
ಮೇ 8ರಂದು ಬೆಳಗ್ಗೆ 11 ಕ್ಕೆ ರಾಮದುರ್ಗ ತಾಲೂಕಿನ ಗ್ರಾಮದಲ್ಲಿ ಹಾಗೂ ಮಧ್ಯಾಹ್ನ 1:30 ಕ್ಕೆ ಅವರಾದಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.