This is the title of the web page
This is the title of the web page

Please assign a menu to the primary menu location under menu

Local News

ಬೆಲೆ ಹೆಚ್ಚಿಸಿದ್ದಕ್ಕೆ  ಬಿಜೆಪಿಗೆ ಮತ ಹಾಕಬೇಕಾ: ಸಿದ್ದರಾಮಯ್ಯ


ಬಿಜೆಪಿಯವರು ನಾವು ಎಲ್ಲಾ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ ಎಂದು ಹೇಳಿಕೊಂಡು ತಿರುಗುವುದು ಅವರಿಗೆ ರೂಢಿಯಾಗಿದೆ ಜನರು ಅವರಿಗೆ ಯಾಕೆ ಮತ ಹಾಕಬೇಕು??  ನೋಟ್ ಬ್ಯಾನ್ ಮಾಡಿ, gst ತಂದರಲ್ಲ ಅದಕ್ಕೆ ಮತ ಹಾಕಬೇಕಾ? ನಿರುದ್ಯೋಗ ಸಮಸ್ಯ ತಂದರಲ್ಲ ಅದಕ್ಕಾ?? ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದಕ್ಕೆ ಹಾಕಬೇಕಾ?  ಪೆಟ್ರೋಲ್ ಡೀಸೆಲ್, ಗ್ಯಾಸ್ ಬೆಲೆ ಹೆಚ್ಚು ಮಾಡಿದ್ದಕ್ಕೆ  ಮತ ಹಾಕಬೇಕಾ ಎಂದ ಪ್ರಶ್ನಿಸಿದರು.

ಮಂಗಳವಾರ ಬೆಳಗಾವಿ  ನಗರದ ಮರಾಠಾ ಮಂಡಳ ಕಾಲೇಜಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ  ಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಗೆ ಜನರು ಯಾವ ಕಾರಣಕ್ಕಾಗಿ ಮತ ನೀಡಬೇಕು ಸಮಾಜದಲ್ಲಿ ಜಾತಿ ಬೇಧ ಮಾಡುತ್ತಿರುವುದಕ್ಕೆ ಮತ ನೀಡಬೇಕಾ? ಭ್ರಷ್ಟಾಚಾರ ಮಾಡಿ ಜೀವ ಪಡೆದದ್ದಕ್ಕೆ ಮತ ನೀಡಬೇಕಾ, ಪಠ್ಯದ ಮೂಲಕ ಇತಿಹಾಸದ ಮಹಾಪುರುಷರ ಅವಮಾನ ಮಾಡಿದ್ದಕ್ಕೆ ಮತ ಹಾಕಬೇಕಾ?  ಕೊನೆಗೆ ದೇಶದ ಸಾಲವನ್ನೆ ಮೂರು ಪಟ್ಟು ಹೆಚ್ಚು ಮಾಡಿದರು ಎಂದು ಕಿಡಿ ಕಾಡಿದರು.

ಬಿಜೆಪಿ ಅವರು ಭ್ರಮೆಯಲ್ಲಿದ್ದಾರೆ, ಅವರಿಂದ ಜನ ಬೇಸತ್ತಿದ್ದಾರೆ, ಮುಂದಿನ ದಿನದಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು, ಶಿಕ್ಷರರಿಗೆ, ಪದವಿದರರಿಗೆ ಏನು ಉಪಯೋಗ ಮಾಡಿದ್ದಾರೆ ಅವರು ಎಂದರು. ಪಠ್ಯ ಪರಿಷ್ಕರಣೆ ಆದ ಮೇಲೆ  ಸಮಿತಿ ವಿಸರ್ಜಿಸಿದ ಏನು ಬಂತು,, ಆ ಪಠ್ಯವನ್ನು ವಿಸರ್ಜಿಸಿ, ಆ ವ್ಯಕ್ತಿಯನ್ನೂ ಕೂಡಾ ವಜಾ ಮಾಡಬೇಬೇಕು ಎಂದರು.

ಈ ವೇಳೆ ಕೆಪಿಸಿಸಿ ಕಾರಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮಾಜಿ ಶಾಸಕರು,  ಚುನಾವಣೆಯ ಉಮೆದುವಾರರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.


Gadi Kannadiga

Leave a Reply