This is the title of the web page
This is the title of the web page

Please assign a menu to the primary menu location under menu

Local News

ಸಾಮಾಜಿಕ ಅನಿಷ್ಠಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಸವ ಧರ್ಮವೊಂದೆ ಪರಿಹಾರ ; . ತೋಂಟದ ಸಿದ್ಧರಾಮ ಸ್ವಾಮೀಜಿ


ಬೆಳಗಾವಿ: ಸಾಮಾಜಿಕ ಅನಿಷ್ಠಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಸವ ಧರ್ಮವೊಂದೆ ಪರಿಹಾರ.  ಬಸವ ಧರ್ಮ ಎಲ್ಲರನ್ನು ಪ್ರೀತಿಸುವ, ಅಪ್ಪಿಕೊಳ್ಳುವ, ಸಕಲ ಜೀವಾತ್ಮರಿಗೂ ಲೇಸನ್ನೆ ಬಯಸುವ ಧರ್ಮ. ಜಾತಿ, ಮತ, ಪಂಥ, ವರ್ಣ, ವರ್ಗ, ಲಿಂಗ ಭೇದವನ್ನು ತೊಡೆದು ಹಾಕಿದ ವಿಶಿಷ್ಠ ಧರ್ಮ ಎಂದು ದಗ-ಡಂಬಳದ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಬೆಳಗಾವಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿಧಾರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ನಾಗನೂರು‌ ರುದ್ರಾಕ್ಷಿ ಮಠದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಅನಿಷ್ಠಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಸವ ಧರ್ಮವೊಂದೆ ಪರಿಹಾರ.  ಸರ್ವರನ್ನೂ ಸಮಾನವಾಗಿ ಕಂಡು, ಪ್ರೀತಿಸಿದರೆ ಅಸಮಾನತೆ, ಸಂಘರ್ಷ, ಶೋಷಣೆಗಳಿಂದ ಸಮಾಜ ಮುಕ್ತವಾಗಲು ಸಾಧ್ಯ.  ಹೆಣ್ಣು ಗಂಡು ಎನ್ನುವ ಬೇಧವಿಲ್ಲದೇ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದು ಬಸವಾದಿ ಶರಣರು. ಲಿಂಗಾಯತ ಧರ್ಮದಲ್ಲಿ ಕಾಯಕ ಮಾಡುವ ಒಳಪಂಗಡಗಳು ಇವೆ ಹೊರತು, ಜಾತಿಗಳಿಲ್ಲ. ಇದೊಂದು ವೈಶಿಷ್ಟ್ಯಪೂರ್ಣ ಧರ್ಮವಾಗಿದ್ದು, ಬಸವಾದಿ ಶರಣರ ಸಂದೇಶಗಳನ್ನು ಮನೆ ಮನಗಳಿಗೆ ತಲುಪಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭೆ ಕಾರ್ಯ ಶ್ಲಾಘನೀಯ ಎಂದು  ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಮುಂದುವರಿದು ಮಾತನಾಡಿದ ಸ್ವಾಮೀಜಿ, ವೈಜ್ಞಾನಿಕ ಯುಗದಲ್ಲಿ ಜನರು ಹೆಚ್ಚೆಚ್ಚು ಧರ್ಮದ ಕಡೆ ಆಕರ್ಷಿತರಾಗಬೇಕು. ಯಾಕೆಂದರೆ ವಿಜ್ಞಾನದ ಪ್ರತಿಫಲ ಒಳ್ಳೆಯದೇ ಆಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಮನೆ ಬಾಗಿಲಿಗೆ ಭೋಗ, ಭಾಗ್ಯಗಳನ್ನು ತಲುಪಿಸುವಷ್ಟು ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಿದೆ. ಆದರೆ, ಇಂತ ಸಂದರ್ಭದಲ್ಲಿ ಧರ್ಮದಿಂದ ಹಿಂದೆ ಸರಿದರೆ ವಿಜ್ಞಾನದ ಪ್ರತಿಫಲ ಅನಾರೋಗ್ಯ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗಬಹುದು. ಧರ್ಮ ಕುರುಡು ಇದ್ದಂತೆ, ವಿಜ್ಞಾನ ಹೆಳವ(ಕಾಲು) ಇಲ್ಲದಂತೆ. ಇವರಡೂ ಪ್ರತ್ಯೇಕವಾಗಿ ಹೋಗಲು ಆಗಲ್ಲ. ಹಾಗಾಗಿ ಧರ್ಮ ಮತ್ತು ವಿಜ್ಞಾನ ಎರಡೂ ಜೊತೆ ಜೊತೆಯಾಗಿ ಹೋದರೆ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ, ಲಿಂಗಾಯತ ಧರ್ಮ 900 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಧರ್ಮದ ಬಗ್ಗೆ ಅರಿವು ಮೂಡಿಸುವ ಪ್ರಮೇಯ ಏಕೆ ಉದ್ಭವವಾಯಿತು ಎಂದು ಯೋಚಿಸಬೇಕಿದೆ. ಸಮಾಜ ಒಂದುಗೂಡಿಸಬೇಕಾದರೆ ಒಗ್ಗಟ್ಟು ಬೇಕು. ಇದಕ್ಕೆ ಬಸವ ತತ್ವ ಮಾರ್ಗದರ್ಶಿಯಾಗುತ್ತದೆ. ಯಾಕೆಂದರೆ ಬಸವ ತತ್ವಕ್ಕೆ ಗುರುತ್ವಾಕರ್ಷಣೆ ಬಲವಿದೆ. ಆಕರ್ಷಕ ಶಕ್ತಿಯೂ ಇದೆ. ಬಸವ ತತ್ವ ಎಂಬುದು ಮಾನವೀಯತೆಯ, ವಿಶ್ವ ಬಂಧುತ್ವದ ತತ್ವ. ಈ ಧರ್ಮದಲ್ಲಿ ಹುಟ್ಟಿದವರೆಲ್ಲರೂ ಈ ದೇಶದವರೇ. ಗುರು ವಿರಕ್ತ ಸೇರಿ 1083 ಮಠಗಳಿವೆ. ಇದರಲ್ಲಿ 730 ವಿರಕ್ತಮಠಗಳಿವೆ. ಅವು ಸರಿಯಾಗಿ ಬಸವ ತತ್ವ ಪ್ರಚುರಪಡಿಸಿದ್ದರೆ, ಸಮಾಜ ಎಷ್ಟೊಂದು ಬದಲಾವಣೆಯಾಗುತ್ತಿತ್ತು ಎಂದರು.
ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿಮಠ ಡಾ‌. ಅಲ್ಲಮಪ್ರಭು ಸ್ವಾಮೀಜಿ, ಶೇಗುಣಸಿ ಮಹಾಂತ ಸ್ವಾಮಿಗಳು, ತಾರಿಹಾಳದ ಅಡವೀಶ್ವರ ದೇವರು, ಹಳಿಂಗಳಿಯ ಶಿವಾನಂದ ದೇವರು, ಓಂಕಾರ ಗುರೂಜಿ, ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸೇರಿ ಮತ್ತಿತರರು ಇದ್ದರು.

Leave a Reply