ಮೂಡಲಗಿ: ರಾಷ್ಟ್ರೀಯ ಯುವ ದಿನಾಚರಣೆಗೆ ಅರ್ಥ ಬರಬೇಕೆಂದರೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯೊಂದಿಗೆ ಅವರ ಆದರ್ಶಗಳ ಪಾಲನೆಗೆ ಆದ್ಯತೆ ನೀಡಬೇಕು ಎಂದು ಮಹಾಲಿಂಗಪುರ ಕೆಎಲ್‌ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಅವರು ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸಯರಗುದ್ರಿಯ ಸಾವಯವ ಯುವ ಕೃಷಿಕ ವೆಂಕಟೇಶ ಮೂಲಿಮನಿ ಮಾತನಾಡಿ, ಸ್ವಾಮಿ ವಿವೇಕಾನಂದರ ಸ್ವದೇಶಿ ಕಾಳಜಿಯ ಆದರ್ಶ ನಮಗೆಲ್ಲ ಮಾದರಿಯಾಗಿದೆ ಎಂದರು. ಖ್ಯಾತ ವೈದ್ಯ ಡಾ.ವಿನೋದ ಮೇತ್ರಿ ಮಾತನಾಡಿ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಯುವ ಸಬಕಲೀಕರಣಕ್ಕಾಗಿ ಸರಕಾರ ಹಮ್ಮಿಕೊಂಡಿರುವ ಯೋಜನೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ವಿದ್ಯಾರ್ಥಿಗಳು ನಿರರ್ಗಳ ಭಾಷಣ ಮಾಡಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ಸಾಮೂಹಿಕವಾಗಿ ಕಂಗೊಳಿಸಿದ್ದು ರೋಮಾಂಚನ ಉಂಟು ಮಾಡಿತು. ಸಿಡಿಲಮರಿಗಳೊಂದಿಗೆ ಅತಿಥಿಗಳು ಸೆಲ್ಪೀ ತೆಗೆಸಿಕೊಂಡು ಸಂಭ್ರಮಿಸಿದರು.
ಇದೇ ವೇದಿಕೆಯಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ವಿನೋದ ಮೇತಿ (ವೈದ್ಯಕೀಯ)್ರ, ಶಿವಲಿಂಗ ಸಿದ್ನಾಳ(ಸಾಹಿತ್ಯ), ವೆಂಕಟೇಶ ಮೂಲಿಮನಿ (ಕೃಷಿ) ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಎಂ.ಎಂ ಪಾಟಿಲ ಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಖ್ಯಾತ ಕಲಾವಿದರಾದ ಮಲ್ಲಪ್ಪ ಗಣಿ, ಮಹಾಲಿಂಗ ಪಾಟೀಲ, ಮುಖ್ಯೋಪಾಧ್ಯಾಯ ಎ.ಪಿ. ಪಾಟೀಲ್ ಹಾಗೂ ಗುರು ಬಳಗ ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Gadi Kannadiga > Local News > ಆಚರಣೆಗಿಂತ ಆದರ್ಶಗಳ ಪಾಲನೆಗೆ ಆದ್ಯತೆ ಇರಲಿ: ಸಿದ್ನಾಳ