This is the title of the web page
This is the title of the web page

Please assign a menu to the primary menu location under menu

State

ರಜತ ಮಹೋತ್ಸವ: ಉದ್ಯೋಗ ಮೇಳಕ್ಕೆ ಶಾಸಕರಿಂದ ಚಾಲನೆ


ಕೊಪ್ಪಳ ಮಾರ್ಚ್ ೦೯: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ “ಸರ್ವರಿಗೂ ಉದ್ಯೋಗ” ಕಾರ್ಯಕ್ರಮದಡಿ ಮಾರ್ಚ್ ೦೯ ರಂದು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಉದ್ಯೋಗ ಮೇಳ ಜರುಗಿತು. ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ರಿಬ್ಬನ್ ಕತ್ತರಿಸಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಪ್ರಾಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಈ ಉದ್ಯೋಗ ಮೇಳದಲ್ಲಿ ಕಿಲೋಸ್ಕರ್, ಎಂ.ಹೆಚ್.ಪಿಎಲ್., ಜೆ.ಎಸ್.ಡಬ್ಲೂö್ಯ ಸೇರಿದಂತೆ ಸುಮಾರು ೨೬ ಸಂಸ್ಥೆಯವರು ಪಾಲ್ಗೊಂಡು, ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸಿದರು. ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ, ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.ಜಿಲ್ಲಾಧಿಕಾರಿಗಳ ಭೇಟಿ: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ನಿಮಿತ್ತ ನಡೆದ ಉದ್ಯೋಗ ಮೇಳ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಭೇಟಿ ನೀಡಿ, ಸಂದರ್ಶನ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆಯಲ್ಲಿ ಜಿಲ್ಲಾ ಕೌಶಲ್ಯ ಮಿಷನ್‌ನ ಅಧಿಕಾರಿಗಳು, ಸಿಬ್ಬಂದಿ ಇದ್ದರು.


Gadi Kannadiga

Leave a Reply