This is the title of the web page
This is the title of the web page

Please assign a menu to the primary menu location under menu

Local News

ತಾಲೂಕಿನ ಆರು ಸೇತೆವೆಗಳು ಜಲಾವೃತ ಸಂಚಾರ ಸ್ಥಗಿತ | ನೂರಾರು ಹೆಕ್ಟರ್ ಪ್ರದೇಶದಲ್ಲಿ ಬೆಳದ ಕಬ್ಬು ನೀರಲ್ಲಿ ಹೋಮ


ಮೂಡಲಗಿ: ತಾಲೂಕಿನ ಸುಣಧೋಳಿ ಹಾಗೂ ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆ, ಅವರಾದಿ ಹಾಗೂ ಮಹಾಲಿಂಗಪೂರಕ್ಕೆ ಸಂಪರ್ಕ ಕಲ್ಪಿಸುವ ಅವರಾದಿ ಸೇತುವೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ವಡೇರಹಟ್ಟಿ ಸೇತುವೆ, ಕಮಲದಿನ್ನಿ ಹಾಗೂ ಹುಣಶ್ಯಾಳ ಪಿವೈಗೆ ಸಂಪರ್ಕ ಕಲ್ಪಿಸುವ ಕಮಲದಿನ್ನಿ ಸೇತುವೆ, ಮೂಡಲಗಿ ತಾಲೂಕಿನ ಢವಳೇಶ್ವರ ಹಾಗೂ ಮುಧೋಳ ತಾಲೂಕಿನ ಢವಳೇಶ್ವರಗೆ ಸಂಪರ್ಕ ಕಲ್ಪಿಸುವ ಢವಳೇಶ್ವರ ಸೇತುವೆಗಳು ಜಲಾವೃತಗೊಂಡ ಪರಿಣಾಮ ಹಲವು ಸಂಚಾರ ಸ್ಥಗಿತಗೊಂಡು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ಕಳೆದ ವರ್ಷವು ಬಿಡುವು ನೀಡದೆ ಸುರಿಯವ ಮಳೆ, ಜೊತೆಯಲ್ಲೇ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಹ ಪರಿಸ್ಥಿತಿ ತೆಲೆದೋರಿತು. ನೆರೆಯ ಮಹಾರಾಷ್ಟ್ರಕ್ಕೆ ತಾಗಿಕೊಂಡಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಪ್ರವಾಹದ ಆರ್ಭಟ, ಮಹಾಮಾರಿ ಕೊರೋನಾ ಅಲೆಯಿಂದ ಅಲ್ಲೋಲ ಕಲ್ಲೋಲ ಮಾಡಿರುವ ಘಟನೆ ಮಾಸುವ ಮುನ್ನವೇ ಮತ್ತೇ ಪ್ರವಾಹದ ಭೀತಿ ರೈತರನ್ನು ನಿದ್ದೆಗೆಡಿಸುವಂತೆ ಮಾಡುವ ಲಕ್ಷಣಗಳು ಕಾಣಿಸುತ್ತಿವೆ.
ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಘಟಪ್ರಭೆ ನದಿ ತನ್ನ ಉಬ್ಬರವನ್ನು ತೋರಿಸುತ್ತಿದೆ ಎಂಬ ಆತಂಕದ ಛಾಯೆಯ ಭಯ ನದಿಯ ಪಕ್ಕದಲ್ಲಿರುವ ಗ್ರಾಮಗಳ ಜನರಿಗೆ ಭಯ ಹುಟ್ಟಿಸುವಂತೆ ಮಾಡಿದೆ. ಹಿರಣ್ಯಕೇಶಿ ನದಿ ಹಾಗೂ ಬಳ್ಳಾರಿ ನಾಲಾ ಮತ್ತು ಮಾರ್ಕಂಡೇಯ ನದಿಯಿಂದ ೩೪೦೦೦ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದ್ದು, ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿರುವ ಘಟಪ್ರಭಾ ನದಿಯ ಉಬ್ಬರದಿಂದ ನೀರಿನ ಮಟ್ಟ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಬೆಳೆಗಾರರ ಗೋಳು : ಘಟಪ್ರಭಾ ನದಿಯ ದಡದಲ್ಲಿ ಇರುವ ಸುಣಧೋಳಿ, ಕಮಲದಿನ್ನಿ, ಮುನ್ಯಾಳ, ಮುಸಗುಪ್ಪಿ, ಪಟಗುಂದಿ, ಹುಣಶ್ಯಾಳ ಪಿವೈ, ರಂಗಾಪೂರ, ಬಿಸನಕೊಪ್ಪ, ಢವಳೇಶ್ವರ ಗ್ರಾಮಗಳು ಸೇರಿದಂತೆ ನದಿಯ ದಡದಲ್ಲಿ ಇರುವ ನೂರಾರು ರೈತರ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದ ಕಾರಣದಿಂದ ಕಬ್ಬಿನ ಬೆಳೆ ನಾಶವಾಗುವ ಪರಿಸ್ಥಿತಿಯನ್ನು ನೋಡಿ ರೈತರು ಕಣ್ಣೀರು ಹಾಕುವಂತಾಗಿದೆ, ಇನ್ನೂ ಕೆಲವೆಡೆ ಗೋವಿನ ಜೋಳಗಳ ಗದ್ದೆಗಳಲ್ಲಿ ನೀರು ನುಗ್ಗಿದೆ, ಇನ್ನೂ ಕಲವೆಡೆ ಕೆಲಸ ಮಾಡುವ ರೈತರಿಗೆ ಯಾವಾಗ ಗದ್ದೆಗಳಿಗೆ ನೀರು ನುಗ್ಗುತ್ತೆ ಎಂಬ ಭಯದ ವಾತಾರವಣ ನಿರ್ಮಾಣವಾಗಿದೆ.
ಘಟಪ್ರಭಾ ನದಿಯ ದಡದಲ್ಲಿ ಇರುವ ಮರಗಳು ಹಾಗೂ ವಿದ್ಯುತ್ ಕಂಬಗಳು ಕೆಲವು ಕಡೆ ಬೀಳುವ ಸಾಧ್ಯತೆ, ನದಿ ದಡದ ಸಮೀಪದ ಇರುವ ಮನೆಗಳಿಗೆ ನೀರು ಹೊಕ್ಕುವ ಸಾಧ್ಯತೆಯೂ ಇದೆ. ನದಿ ತೀರದ ಜನರು ರಾತ್ರಿ ನಿದ್ದೆ ಮಾಡೇ ಯಾವಗ ಎಷ್ಟು ನೀರು ಬುತ್ತದೆ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.


Gadi Kannadiga

Leave a Reply