This is the title of the web page
This is the title of the web page

Please assign a menu to the primary menu location under menu

Local News

ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡ ಗೋಕಾಕದ ಆರು ಪ್ರೌಢಶಾಲೆಗಳು


ಗೋಕಾಕ : ಗೋಕಾಕ ಮತಕ್ಷೇತ್ರದ ಆರು ಪ್ರೌಢಶಾಲೆಗಳು ಸರಕಾರಿ ಸಂಯುಕ್ತ ಪದವಿ ಪೂರ್ವ ಉನ್ನತೀಕರಣಗೊಂಡು ಕಾಲೇಜುಗಳಾಗಿ ಮಂಜೂರಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ .

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಾಲೂಕಿನ ಸರಕಾರಿ ಪ್ರೌಢಶಾಲೆ ಮಾಲದಿನ್ನಿ, ಕೊಳವಿ, ಹೀರೇನಂದಿ, ಬೆನಚಿನಮರಡಿ , ಮಲಾಪೂರ ಪಿ.ಜಿ.ಹಾಗೂ ಪಾಮಲದಿನ್ನಿ ಸರಕಾರಿ ಪ್ರೌಢಶಾಲೆಗಳು ಸಂಯುಕ್ತ ಪದವಿ ಪೂರ್ವ ಕಾಲೇಜುಗಳಾಗಿ ಮಂಜೂರಾಗಿದ್ದು ಅತೀ ಶೀಘ್ರದಲ್ಲೇ ಕಾಲೇಜುಗಳಾಗಿ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ಸಮಾಜಕ್ಕೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕ್ಷೇತ್ರದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಅನುಕೂಲವಾಗಲಿ ಎಂಬ ಮಹತ್ತರ ಉದ್ದೇಶದಿಂದ ಸಂಯುಕ್ತ ಪದವಿ ಪೂರ್ವ ಕಾಲೇಜು ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದ್ದು ,ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಬೇಕು.

ಗೋಕಾಕ ಮತಕ್ಷೇತ್ರದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕಲ್ಲದೆ ಮತಕ್ಷೇತ್ರದ ಇನ್ನೂ ಹಲವು ಗ್ರಾಮಗಳ ಪ್ರೌಢಶಾಲೆಗಳು ಸಂಯುಕ್ತ ಪದವಿ ಪೂರ್ವ ಕಾಲೇಜುಗಳಾಗಿ ಮಂಜೂರ ಹೊಂದುವ ಹಂತದಲ್ಲಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply