ಯಮಕನಮರಡಿ : ಪತ್ರಿಕಾರಂಗವು ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಜಾಗೃತಗೊಳಿಸಿ ಕ್ರೀಯಾಶೀಲಗೊಳ್ಳಲು ಶ್ರಮಿಸುತ್ತಿರುವ ಏಕೈಕ ಅಂಗವಾಗಿದೆ ಎಂದು ಹಿರಿಯ ಸಾಹಿತಿ ಎಸ್.ಎಮ್.ಶಿರೂರ ಹೇಳಿದರು.
ಅವರು ಗುರುವಾರ ದಿ. ೧೭ ರಂದು ಹಿಡಕಲ್ ಡ್ಯಾಮಿನ ಸರ್ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ತೀವ್ರ ಮದುಮೇಹದಿಂದ ಬಳಲುತ್ತಿರುವ ಪತ್ರಕರ್ತ ರಮೇಶ ನಾಯ್ಕ ಇವರಿಗೆ ಕರ್ನಾಟಕ ಪತ್ರಕರ್ತರ ಸಂಘದಿಂದ ಧನಸಹಾಯ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಧನಸಹಾಯ ಚೆಕ್‌ವನ್ನು ಹೇಮಾ ರಮೇಶ ನಾಯ್ಕ ಇವರಿಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎಮ್.ಬಿ. ಶಿವಪೂಜಿ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ದಿನ£ತ್ಯವು ಪತ್ರಿಕೆಗಳನ್ನು ಓದುವ ಅಭಿರುಚಿ ಬೆಳಸಿಕೊಂಡು ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ದಿನಪತ್ರಿಕೆಗಳನ್ನು ಓದುವದರಿಂದ ದೇಶದ ಹಾಗೂ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ವಿಧ್ಯಮಾನಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಂಕಟದಲ್ಲಿರುವ ಪತ್ರಕರ್ತರಿಗೆ ಕರ್ನಾಟಕ ಪತ್ರಕರ್ತರ ಸಂಘವು ಹಲವಾರು ವರ್ಷಗಳಿಂದ ಸಹಾಯ ಸಹಕಾರ £Ãಡುತ್ತಾ ಬಂದಿದೆ ಎಂದು ಹೇಳಿದರು.
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಹೊಸಮ£, ವಿಶ್ವೇಶ್ವರಯ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ ಮಾತನಾಡಿ ಗ್ರಾಮೀಣ ಪತ್ರಕರ್ತರು ಇಂದು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಹಸಿರುಕ್ರಾಂತಿ ದಿನಪತ್ರಿಕ ಸಂಪಾದಕ ಸಂಪತ್ ಮುಚಳಂಬಿ, ಶೌಕತ ಮಕಾನದಾರ, ರಸ್ತುಂಪೂರ ಗ್ರಾ.ಪಂ. ಸದಸ್ಯ ಭೀಮಶಿ ಬೋರವಗೋಳ, ಕರ್ನಾಟಕ ಪತ್ರಕರ್ತ ಸಂಘ ಹುಕ್ಕೇರಿ ತಾಲೂಕಾ ಉಪಾಧ್ಯಕ್ಷ ನಂದಕಿಶೋರ ಗೌಡರ, ಕಾರ್ಯದರ್ಶಿ ಕುಶಾಲ ನಾಗನೂರಿ, ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘದ £ರ್ದೇಶಕ ಎ.ಎಮ್. ಕರ್ನಾಚಿ, ಶಿಕ್ಷಕ ಎಸ್.ಬಿ.ಶಿವನಗೋಳ, ಹಾಗೂ ವಿದ್ಯಾರ್ಥಿಗಳು ಇದ್ದರು.
Gadi Kannadiga > Local News > ಪತ್ರಿಕಾ ರಂಗವು ಸಮಾಜದಲ್ಲಿ ಜಾಗೃತಿಗೊಳಿಸುವ ಏಕೈಕ ಅಂಗ : ಎಸ್.ಎಮ್. ಶಿರೂರ
ಪತ್ರಿಕಾ ರಂಗವು ಸಮಾಜದಲ್ಲಿ ಜಾಗೃತಿಗೊಳಿಸುವ ಏಕೈಕ ಅಂಗ : ಎಸ್.ಎಮ್. ಶಿರೂರ
Suresh18/08/2023
posted on
