This is the title of the web page
This is the title of the web page

Please assign a menu to the primary menu location under menu

Local News

ನೀಟ್ ಪರೀಕ್ಷೆ: ೨೩೪ನೇ ರ‍್ಯಾಂಕ್ ನಡೆದ ಸ್ನೇಹಾ


ಶಿಂದಿಕುರಬೇಟ ೧೩: ನೀಟ್ ಪರೀಕ್ಷೆಯಲ್ಲಿ ೨೩೪ನೇ ರ‍್ಯಾಂಕ್ ಪಡೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡು ಸಾಧನೆ ಮಾಡಿದ ಗ್ರಾಮದ ವಿದ್ಯಾರ್ಥಿನಿ ಸ್ನೇಹಾ ಲಗಮನ್ನ ನಾಯಿಕ ಇವಳು ಶಿಂದಿಕುರಬೇಟ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿ ತನ್ನ ಸಾಧನೆಯ ಅನುಭವ ಹಂಚಿಕೊಂಡಳು.
ಈ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿನಿ ಸ್ನೇಹಾ ಇವಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಸರಿಸುವ ವಿಧಾನಗಳನ್ನು ಕುರಿತು ವಿವರಿಸಿದಳು ಕಾರ್ಯಕ್ರಮದಲ್ಲಿ ಇವಳ ತಂದೆ-ತಾಯಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಎಮ್‌ಎಸ್ ಬೆಳಗಲಿ ವಿದ್ಯಾರ್ಥಿಗಳು ಸತತ ಅಭ್ಯಾಸದಿಂದ ಶಾಲೆಗೆ ಗ್ರಾಮಕ್ಕೆ ತಂದೆ ತಾಯಿಗಳಿಗೆ ಕೀರ್ತಿ ತರುವಂತೆ ಆಗಬೇಕು ಎಂದು ಪ್ರೇರಣೆಯನ್ನು ನೀಡಿದರು ೧೦ನೇ ವರ್ಗದ ವರ್ಗ ಶಿಕ್ಷಕ ಎಸ್‌ಎನ್ ವಡರಟ್ಟಿ ವಿದ್ಯಾರ್ಥಿಗಳು ಉತ್ತಮ ಅಭ್ಯಾಸದಿಂದ ಆದರ್ಶ ವಿದ್ಯಾರ್ಥಿಗಳು ಆಗಬಹುದು ಎಂದು ಹೇಳಿದರು. ಆರ್‌ವಾಯ್ ಬೆಳಗಲಿ, ಎಸ್‌ಎಂ ನದಾಫ್. ಎಎಸ್ ಪಟಾತ, ಆರ್‌ಬಿಕರೆಯಪ್ಪಗೋಳ ಕೆವಿ ಕಡ್ಡಿ ಉಪಸ್ಥಿತರಿದ್ದರು. ವನಿತಾ ಪಾಟೀಲ್ ಸ್ವಾಗತಿಸಿ. ಪಿಎಲ್ ಮಲ್ಲಾಪುರ್ ವಂದಿಸಿದರು.


Gadi Kannadiga

Leave a Reply