This is the title of the web page
This is the title of the web page

Please assign a menu to the primary menu location under menu

State

ಹಿಮೋಫಿಲಿಯಾ ಮಕ್ಕಳ ತಾಯಂದಿರ ನೋವನ್ನು ಶಮನಗೊಳಿಸಲು ಸೊಸೈಟಿ ಸದಾ ಸಿದ್ಧ: ಶೀಲಾ ಅಂಚಟಗೇರಿ


ಬೆಂಗಳೂರು: ಹಿಮೋಫಿಲಿಯಾ ಮಕ್ಕಳ ತಾಯಂದಿರ ನೋವನ್ನು ಶಮನಗೊಳಿಸಲು ಸೊಸೈಟಿ ಸದಾ ಸಿದ್ಧವಾಗಿದೆ ಎಂದು ಮಹಾಪೌರ ಈರೇಶ ಅಂಚಟಗೇರಿ ಅವರ ಪತ್ನಿ ಹಾಗೂ ವಕೀಲೆ ಶೀಲಾ ಅಂಚಟಗೇರಿ ಅವರು ಮುಖ್ಯ ಅತಿಥಿಂಯಾಗಿ ಹುಬ್ಬಳ್ಳಿ-ಧಾರವಾಡ ಹಿಮೋಫಿಲಿಯಾ ಸೊಸೈಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಟಿಕಾರೆ ವಹಿಸಿದ್ದರು. ಜರುಗಿದ ವಿಶೇಷ ಮಹಾಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಹಿಮೋಫಿಲಿಯಾ ಸೊಸೈಟಿ ಅಭ್ಯುದಯಕ್ಕೆ ಸದಸ್ಯರುಗಳು ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಿದರು. ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶಾರದಾ ಸತ್ತಿಗೇರಿ, ಉಪಾಧ್ಯಕ್ಷರಾಗಿ ರಮೇಶ ಶಿವಕ್ಕನವರ್, ಕಾರ್ಯದರ್ಶಿಯಾಗಿ ಜಯಶ್ರೀ ಉಜೈನಿಮಠ, ಜಂಟಿ ಕಾರ್ಯದರ್ಶಿಯಾಗಿ ಲಿನಾ ಮಹೇಂದ್ರಕರ್, ಖಜಾಂಚಿಯಾಗಿ ರಾಘವೇಂದ್ರ ಹೆಗಡೆ, ಸದಸ್ಯರುಳಾಗಿ ಶಂಕರ ಟಿಕಾರೆ, ಭೀಮಪ್ಪ ಕುಳಿಗೊಡ, ನಿಂಗಪ್ಪ ಕರಡಿಗುಡ್ಡ, ಶೃತಿ ಗಾವಡೆ, ಸಿದ್ದನಗೌಡ ನೂಲ್ವಿ, ಮುತ್ತುರಾಜ ತೂಟ್ಕರ್, ಮತ್ತು ಗೌರವಾಧ್ಯಕ್ಷರನ್ನಾಗಿ ಸುರೇಶ ಟಿಕಾರೆ ಅವರನ್ನು ಆಯ್ಕೆ ಮಾಡಿ ಸೊಸೈಟಿಗೆ ಮಾರ್ಗದರ್ಶನ ನೀಡುವಂತೆ ಕೋರಲಾಯಿತು. ಸಭೆಗೆ ನೂರಕ್ಕೂ ಹೆಚ್ಚು ಸದಸ್ಯರು ಹಾಗೂ ಅವರ ಕುಟುಂಬದವರು ಪಾಲ್ಗೊಂಡಿದ್ದರು. ಶಾರದಾ ಸತ್ತಿಗೆರಿ ಸ್ವಾಗತಿಸಿದರು. ಜಯಶ್ರೀ ಉಜೈನಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Gadi Kannadiga

Leave a Reply