This is the title of the web page
This is the title of the web page

Please assign a menu to the primary menu location under menu

Local News

ಶೀಘ್ರದಲ್ಲೇ ಸೂಪರ್ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ : ಶಾಸಕ ಅನಿಲ ಬೆನಕೆ


ಬೆಳಗಾವಿ ನಗರದಲ್ಲಿ ರೂ. ೧೪೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸೂಪರ್ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಯನ್ನು ಮಂಗಳವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಭೀಮ್ಸ್ ಮುಖ್ಯ ಸರ್ಜನ್ ಎ. ಬಿ. ಪಾಟೀಲ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೊತೆಗೆ ಪರೀಶೀಲನೆ ನಡೆಸಿದರು. ಸದ್ಯ ಕಾಮಗಾರಿಯು ಮುಗಿಯುವ ಹಂತದಲ್ಲಿದ್ದು, ಇನ್ನು ನಾಲ್ಕೆöÊದು ತಿಂಗಳಿನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಂತರದಲ್ಲಿ ಮಾಹಿತಿ ನೀಡಿದ ಶಾಸಕರು ಬೆಳಗಾವಿ ನಗರದಲ್ಲಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಈ ಆಸ್ಪತ್ರೆಯ ಕಾಮಗಾರಿಗೆ ೨೦೧೮ ರಲ್ಲಿ ಚಾಲನೆ ನೀಡಲಾಗಿತ್ತು, ಸಾಂಕ್ರಾಮಿಕ ರೋಗ ಹಾಗೂ ಕೋವಿಡ್ ಮತ್ತು ಮಳೆಯ ಕಾರಣ ಆಸ್ಪತ್ರೆ ನಿರ್ಮಾಣದ ಕಾಮಗಾರಿಯು ಒಂದು ವರ್ಷ ನಿಧಾನವಾಗಿದೆ. ಆಸ್ಪತ್ರೆಯ ಕಟ್ಟಡವು ನಾಲ್ಕು ಮಹಡಿವರೆಗೆ ನಿರ್ಮಾಣವಾಗುತ್ತಿದ್ದು, ಒಂದು ಮಹಡಿಯಲ್ಲಿ ನಾಲ್ಕು ವಿಭಾಗಗಳು ಇರಲಿದ್ದು ಹೀಗೆ ಆಸ್ಪತ್ರೆಯಲ್ಲಿ ಒಟ್ಟು ಎಂಟು ವಿಭಾಗಗಳು ಇರಲಿವೆ ಎಂದು ತಿಳಿಸಿದರು.
ಮೊದಲ ಮಹಡಿಯಲ್ಲಿ ನಿರೋಲಾಜಿ ವಿಭಾಗ, ನಿರೋ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಹಾಗೂ ಇಂಡೋ ಕ್ರೋನಾಲಜಿ ವಿಭಾಗಗಳು ಇರಲಿವೆ. ಎರಡನೆಯ ಮಹಡಿಯಲ್ಲಿ ಗ್ಯಾಸ್ಟ್ರೋಲಾಜಿ, ನೆಪ್ರೋಲಾಜಿ, ಸರ್ಜಿಕಲ್ ಗ್ಯಾಸ್ಟ್ರೋಲಾಜಿ, ವಿಭಾಗಗಳು ಇರಲಿವೆ. ಮೂರನೇ ಮಹಡಿಯಲ್ಲಿ ವಿ.ಆಯ್.ಪಿ ಕೊಠಡಿ, ಜನರಲ್ ಕೊಠಡಿ ಗಳು ಇರಲಿದ್ದು, ನಾಲ್ಕನೇಯ ಮಹಡಿಯಲ್ಲಿ ಆಪರೇಷನ್ ಥಿಯೇಟರ್‌ಗಳು ಇರಲಿವೆ ಎಂದು ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಸೂಪರ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ಕಾಮಗಾರಿಯು ಇನ್ನೂ ನಾಲ್ಕೆöÊದು ತಿಂಗಳಲ್ಲಿ ಪೂರ್ಣ ಆಗಲಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದಾಗ ಅಗಸ್ಟ್ ಅಥವಾ ಸಪ್ಟೆಂಬರ್ ವರೆಗೆ ಕಾಮಗಾರಿಯು ಪೂರ್ಣ ಆಗಲಿದೆ ಎಂದು ತಿಳಿಸಿದ್ದು, ಕಾಲಮಿತಿ ಒಳಗಡೆ ಸಂಪೂರ್ಣ ಕಾಮಗಾರಿಯನ್ನು ಮುಗಿಸಲು ಸೂಚನೆ ನೀಡಲಾಗಿದೆ ಎಂದ ಅವರು ಇನ್ನೂ ಆರೇ ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಗೆ ನೀಡುವುದಾಗಿ ತಿಳಿಸಿದರು.
ಮುಂದಿನ ಮೂರು ತಿಂಗಳ ಒಳಗಡೆ ತಾಯಿ ಮಕ್ಕಳ ಆಸ್ಪತ್ರೆ, ಟ್ರೋಮಾ ಸೆಂಟರ್, ನರ್ಸಿಂಗ್ ಕಾಲೇಜ ಕೂಡಾ ಪ್ರಾರಂಭವಾಗುವುದಾಗಿ ತಿಳಿಸಿದ ಅವರು ಈ ಆಸ್ಪತ್ರೆಯಿಂದ ಬೆಳಗಾವಿ ಜಿಲ್ಲೆಗೆ ಅಷ್ಟೇ ಅಲ್ಲದೆ ನೇರೆಯ ಗೋವಾ ಹಾಗೂ ಮಹಾರಾಷ್ಟ್ರದ ರೋಗಿಗಳಿಗೆ ಎಲ್ಲ ತರಹದ ಚಿಕಿತ್ಸೆಗಳು ಉಚಿತವಾಗಿ ಸಿಗಲಿದ್ದು, ಆಸ್ಪತ್ರೆಯ ಉದ್ಘಾಟನೆಗೆ ಮುಖ್ಯಮಂತ್ರಿಗಳ ಜೊತೆಗೆ ದೇಶದ ಪ್ರಧಾನಿಗಳನ್ನು ಕರೆಸುವ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ಪರಿಶೀಲನೆ ನಡೆಸಿದ ಬಳಿಕ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರೊಂದಿಗೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆರವರು ಮೊದಲ ಎರಡು ಮಹಡಿಯ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಿ, ಇನ್ನುಳಿದ ಎರಡು ಮಹಡಿ ಕಾಮಗಾರಿಯನ್ನು ಐದು ತಿಂಗಳ ಒಳಗಾಗಿ ಮುಗಿಸಿಕೊಡುವಂತೆ ತಿಳಿಸಿದರು. ಇದಕ್ಕೆ ಪ್ರಾದೇಶಿಕ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ ಎಂದು ತಿಳಿಸಿದರು.


Gadi Kannadiga

Leave a Reply