ಯರಗಟ್ಟಿ: ತಾಲೂಕಿನ ಸೊಪ್ಪಡ್ಲ ಗ್ರಾಮ ಪಂಚಾಯತನ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅವಿರೋಧ ಆಯ್ಕೆ ಜರುಗಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ಸತ್ಯವ್ವ ಮಾರುತಿ ಗೊರಗುದ್ದಿ ಉಪಾಧ್ಯಕ್ಷರಾಗಿ ಶ್ರೀಮತಿ ವಿಜಿಯಾ ಭಿಮಪ್ಪ ಗಂಗರಡ್ಡಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ್ರರು ಪಂಚಾಯತ ರಾಜ್ಯ ಇಲಾಖೆಯ ಎಚ್. ಸಿ. ತಳವಾರ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಸೊಪ್ಪಡ್ಲ ಗ್ರಾ. ಪಂ. ಸದಸ್ಯರುಗಳಾದ ಸುರೇಶ ಬಂಟನೂರ, ಕಿರಣ ಹುಣಶ್ಯಾಳ, ಸುಬಾಷ ಕರೆನ್ನವರ, ಶ್ರೀಮತಿ ಸುವರ್ಣಾ ಹೊಸಮಠ, ರವಿಕಿರಣ ಪಾಟೀಲ, ಶ್ರೀಮತಿ ಸುನಿತಾ ಬಾವಿಹಾಳ, ಶ್ರೀಮತಿ ಸುಜಾತಾ ಕಾಡಮಠ, ಹನಮಂತ ಯಕ್ಕನ್ನವರ, ಶ್ರೀಮತಿ ಲಲಿತಾ ಕುಂಬಾಗೇರಿಮಠ, ಶ್ರೀಮತಿ ಮಹಾದೇವಿ ಕೊಡ್ಲಿವಾಡ, ನಂದಗೋಪಾಲ ಕಡೇಮನಿ, ಶ್ರಿಮತಿ ಭಾಗ್ಯಶ್ರೀ ಹರಿಜನ, ಬಸಪ್ಪ ಪಟ್ಟಣಶೆಟ್ಟಿ, ಫಕ್ಕೀರಪ್ಪ ಹೊಸಮನಿ, ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಕುಮಾರಿ ವಾಹೀದಾ ಮುಲ್ಲಾ ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮಸ್ಥರು ಇದ್ದರು.