This is the title of the web page
This is the title of the web page

Please assign a menu to the primary menu location under menu

State

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೪


ಗದಗ ಅಗಸ್ಟ ೨: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ೧-೧-೨೦೨೪ ಅರ್ಹತಾ ದಿನಾಂಕವುಳ್ಳಂತೆ ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೪ ರ ವೇಳಾ ಪಟ್ಟಿಯನ್ನು ಹೊರಡಿಸಿರುತ್ತಾರೆ.ಸದರಿ ವೇಳಾಪಟ್ಟಿಯಂತೆ ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಅಂಗವಾಗಿ ಮತಗಟ್ಟೆ ಮಟ್ಟದ ಅದಿಕಾರಿಗಳು(ಬಿ.ಎಲ್.ಓ) ಜುಲೈ ೨೧ ರಿಂದ ಅಗಸ್ಟ ೨೧ ರವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಕೆಳಗಿನಂತೆ ಮಾಹಿತಿ ಪಡೆಯಬಹುದು.
ಮತದಾರ ಪಟ್ಟಿಯಲ್ಲಿ ನೊಂದಣಿಯಾಗದ ಅರ್ಹ ನಾಗರಿಕರು (ಅರ್ಹತೆ ದಿನಾಂಕ ೧-೧೦-೨೦೨೩ ), ಪ್ರೊಸ್ಪೆಕ್ಟಿವ್ (ಭಾವೀ) ಮತದಾರರು (ಅರ್ಹತೆ ದಿನಾಂಕ ೧-೧-೨೦೨೪), ಪ್ರೊಸ್ಪೆಕ್ಟಿವ್ (ಭಾವೀ) ಮತದಾರರು (ನಂತರದ ಮೂರು ಅರ್ಹತಾ ದಿನಾಂಕಗಳಿಗೆ ಅರ್ಹತಗೊಳ್ಳುವ ಮತದಾರರು), ಒಂದಕ್ಕಿಂತ ಹೆಚ್ಚು ಬಾರಿ ನೊಂದಣಿಯಾದ ಮತದಾರರ ವಿವರ/ ಮೃತ ಮತದಾರರ ವಿವರ/ ಶಾಶ್ವತವಾಗಿ ವರ್ಗಾವಣೆಗೊಂಡ ಮತದಾರರ ವಿವರ, ಮತದಾರರ ಪಟ್ಟಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು(ಉತ್ತಮ ಗುಣಮಟ್ಟವಲ್ಲದ ಮತದಾರರ ಭಾವಚಿತ್ರ ಸಂಗ್ರಹಣೆ, ವಿಳಾಸವನ್ನು ಸರಿಯಾಗಿ ಕಾಲೋಚಿತಗೊಳಿಸುವುದು,ವಯಸ್ಸಿನ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಇತರ ನ್ಯೂನ್ಯತೆಗಳನ್ನು ಸರಿಪಡಿಸುವುದು),ದಿವ್ಯಾಂಗಚೇತನರ ಮಾಹಿತಿಯನ್ನು ಕಾಲೋಚಿತಗೊಳಿಸುವುದು (ನಮೂನೆ ೮ರ ಮುಖಾಂತರ), ನ್ಯೂನತೆಗಳನ್ನು ಸರಿಪಡಿಸುವುದು ಒಂದೇ ರೀತಿಯ ನಮೂದುಗಳ ಪರಿಶೀಲನೆ, ರಿಪೀಟ್ ಎಪಿಕ್‌ಗಳ ಪರಿಶೀಲನೆ,ಇನ್ನಿತರೆ ಮತದಾರ ಪಟ್ಟಿಗಳ ಮಾಹಿತಿಯ ಸಂಗ್ರಹಣೆ ಈ ಮೇಲಿನ ಮಾಹಿತಿಗಳನ್ನು ಬಿ.ಎಲ್.ಓಗಳು ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿದಾಗ ಸಂಪೂರ್ಣ ಸಹಕಾರವನ್ನು ನೀಡಲು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ತಿಳಿಸಿದ್ದಾರೆ.


Leave a Reply