This is the title of the web page
This is the title of the web page

Please assign a menu to the primary menu location under menu

Local News

ಸ್ಪೆಷಲ್ ಕ್ಯಾನ್ಸ್ಲೇಷನ್ ಸ್ಟಾö್ಯಂಪ್ಸ್: ಜೂನ್ ೨೧ ರಂದು


ಬೆಳಗಾವಿ,ಜೂನ್೧೭: ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ ೨೧ ರಂದು ಬೆಳಗಾವಿ, ರಾಮದುರ್ಗ ಮತ್ತು ಬೈಲಹೊಂಗಲ ಪ್ರಧಾನ ಅಂಚೆ ಕಚೇರಿಗಳಲ್ಲಿ ಸ್ಪೆಷಲ್ ಕ್ಯಾನ್ಸ್ಲೇಷನ್ ಆಫ್ ಸ್ಟಾö್ಯಂಪ್ಸ್ ಆಯೋಜಿಸಲಾಗಿದೆ.
ಅಂಚೆ ಚೀಟಿಗಳ ಕುರಿತಾಗಿ ಈಗ ಜನರಿಗೆ ಉತ್ಸಾಹ ಕಡಿಮೆ ಆಗುತ್ತಿದೆ ಇದನ್ನು ಉತ್ತೇಜಿಸುವ ಸಲುವಾಗಿ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಗುಣವನ್ನು ಪುನರುಜ್ಜೀನಗೊಳಿಸುವ ಉದ್ದೇಶದಿಂದ ದೇಶದ ಎಲ್ಲ ಅಂಚೆ ಕಚೇರಿಗಳಲ್ಲಿ ಈ ಸ್ಪೆಷಲ್ ಕ್ಯಾನ್ಸ್ಲೇಷನ್ ಆಫ್ ಸ್ಟಾö್ಯಂಪ್ಸ್ ಆಯೋಜಿಸಲಾಗಿದೆ. ಅಂದು (ಜೂನ್ ೨೧) ಅಂಚೆ ಕಚೇರಿಗಳಿಗೆ ಬರುವ ಮತ್ತು ಹೋಗುವ ಪ್ರತಿಯೊಂದು ಅಂಚೆ ಪತ್ರಕ್ಕೆ ವಿಶೇಷ ಮೊಹರು ಒತ್ತಲಾಗುವುದು.
ಅದರಂತೆ ಜಿಲ್ಲೆಯ ಮೂರು ಪ್ರಧಾನ ಅಂಚೆ ಕಚೇರಿಗಳಲ್ಲಿಯೂ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ ೧೨ ರಂದು ಸ್ಪೆಷಲ್ ಕ್ಯಾನ್ಸ್ಲೇಷನ್ ಆಫ್ ಸ್ಟಾö್ಯಂಪ್ಸ್ ಆಯೋಜಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Gadi Kannadiga

Leave a Reply