ಬೆಳಗಾವಿ,ಅ.೧೫: ಮತದಾರರ ಪಟ್ಟಿಯಲ್ಲಿ ನಮೂದು ಇರುವ ಎಲ್ಲ ಮತದಾರರು ತಮ್ಮ ಆಧಾರ ಸಂಖ್ಯೆಗಳನ್ನು ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿ/ಮತದಾರರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆ ೬ಬಿ ದಲ್ಲಿ ಅರ್ಜಿ ಸಲ್ಲಿಸುವುದು ಅಥವಾ ಆನ್ಲೈನ ಮೂಲಕ ಎನ್.ವಿ.ಎಸ್.ಪಿ/ವಿಎಚ್ಎ ಆಪ್ ಮೂಲಕ ತಮ್ಮ ಅಧಾರ ಸಂಖ್ಯೆಗಳನ್ನು ಲೀಕ್ ಮಾಡಿಕೊಳ್ಳುವಂತೆ ಆಧಾರ ಕಾರ್ಡ ಇಲ್ಲದೇ ಇರುವ ಮತದಾರರು ಈ ಕೆಳಗಿನ ದಾಖಲೆಗಳೊಂದಿಗೆ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬಹುದು.
ಮತದಾರರ ಆಧಾರ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡಲು ಸ್ವಯಂ ಪ್ರೇರಿತವಾಗಿ ನಮೂನೆ ೬ ಬಿ ಗಳನ್ನು ಸಂಗ್ರಹಿಸಲು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ತೆಗೆದು ಹಾಕುವಿಕೆ ಮಾಡಲು ಅಕ್ಟೋಬರ್ ೧೬ ರಂದು ವಿಶೇಷ ಆಂದೋಲನವನ್ನು ನಡೆಸಲು ನಿರ್ದೇಶಿಸಲಾಗಿದೆ.
ವಿಶೇಷ ಆಂದೋಲನದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ತೆಗೆದು ಹಾಕುವಿಕೆ ಮಾಡುವ ಕುರಿತು ಸೌಲಭ್ಯಗಳನ್ನು ಕಲ್ಪಿಸಿದೆ. ಆದ್ದರಿಂದ ಅಕ್ಟೋಬರ್ ೧೬ ರಂದು ಜರುಗುವ ವಿಶೇಷ ಆಂದೋಲನದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಮತದಾರರ ಪಟ್ಟಿ ಪರಿಷ್ಕರಣೆ: ಅ.೧೬ ರಂದು ವಿಶೇಷ ಆಂದೋಲನ