This is the title of the web page
This is the title of the web page

Please assign a menu to the primary menu location under menu

Local News

ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿ ವಿದ್ಯಾರ್ಥಿಗಳ ವಿಶೇಷ ಸಾಧನೆ


ಬೆಳಗಾವಿ: ಕಳೆದವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿದ ಮಿ£ ಒಲಿಂಪಿಕ್ಸ್ ಕ್ರೀಡಾಕೂಟದ ‘ಭಾರ ಎತ್ತುವ ಸ್ಪರ್ಧೆ’ಯಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಮರಾಠಿ ಮಾದರಿ ಶಾಲೆಯ ಸ್ಕೌಟ್ ಮತ್ತು ಗೈಡ್ ವಿಭಾಗದ ವಿದ್ಯಾರ್ಥಿಗಳು ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಕಸರ್, ಶ್ರಾವಣಿ ಮಾಸ್ಕರ ಮತ್ತು ಸೃಷ್ಟಿ ಮುತಗೆಕರ ಚಿನ್ನದ ಪದಕ, ಸಮೀಕ್ಷಾ ಮನ್ಮೋಡೆ ಮತ್ತು ವೇದಿಕಾ ಕರ್ಲೇಕರ ಬೆಳ್ಳಿ ಪದಕಗಳನ್ನು ಗೆದ್ದು ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಶ್ರೇಯಸ್ ಉಚ್ಚುಕರ ಬೆಳ್ಳಿ, ನಾಗೇಶ ಪಾಟೀಲ, ಕೇತನ ಪಾಟೀಲ, ಆದರ್ಶ ದ್ಯಾಗೊಂಡೆ ಮತ್ತು ಕಪಿಲ್ ತಳವಾರ ಕಂಚಿನ ಪದಕ ಗೆದ್ದುಕೊಂಡು ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಒಟ್ಟಾರೆ ಕ್ರೀಡಾಕೂಟದಲ್ಲಿ ಮೂರು ಚಿನ್ನ , ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡು ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸದಾನಂದ ಮಾಲಶೆಟ್ಟಿ ಮತ್ತು ರಮೇಶ ಅಲಗುಡೆಕರ ಮಾರ್ಗದರ್ಶನ £Ãಡಿದ್ದರು. ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಶಾಲಾ ಶಿಕ್ಷಕರು, ಶಾಲಾ ಎಸ್ಡಿಎಂಸಿ ಬಳಗ ಮತ್ತು ಗ್ರಾಮಸ್ಥರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ ಪದಕ ವಿಜೇತ ಸರ್ವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾ£ಸಿದ್ದಾರೆ.


Gadi Kannadiga

Leave a Reply