This is the title of the web page
This is the title of the web page

Please assign a menu to the primary menu location under menu

State

ಆಷಾಡ ಮಾಸದ ಏಕಾದಶಿ ಪ್ರಯುಕ್ತ ಪಾಂಡುರಂಗ ವಿಠ್ಠಲನಿಗೆ ವಿಶೇಷ ಪೂಜೆ


ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಆಷಾಡ ಮಾಸದ ಏಕಾದಶಿ ಪ್ರಯುಕ್ತ ಪಂಡರಾಪುರದ ಪಾಂಡುರಂಗ ವಿಠಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇಲ್ಲಿಯ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಶ್ರೀ ಪಾಂಡುರಂಗ ವಿಠ್ಠಲ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಂಚಾಮೃತ ಅಭಿಷೇಕ ಮಾಡಿ ತುಳಸಿ ಹೂ ಮಾಲೆ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕಾರ ಮಾಡಿದ ಪಾಂಡುರಂಗ ವಿಠಲನ ಮಾಲಾಧಾರಿಗಳು ವಿಶೇಷ ಪೂಜೆ ಮಾಡಿ ಸಂಭ್ರಮ ಸಡಗರದಿಂದ ಏಕಾದಶಿಯನ್ನು ಆಚರಣೆ ಮಾಡಿದರು.

ಆಷಾಡ ಮಾಸದ ಏಕಾದಶಿ ಹಿನ್ನೆಲೆಯಲ್ಲಿ ಪಾಂಡುರಂಗನ ಮಾಲಾಧಾರಿಗಳಿಂದ ಏಕಾದಶಿ ದಿನದಂದು ಉಪವಾಸ ವೃತ ಮಾಡಿ ಇಡೀ ರಾತ್ರಿ ಪಾಂಡುರಂಗ ವಿಠ್ಠಲನ ನಾಸ್ಮರಣೆ ಹಾಗೂ ಭಜನೆಗಳನ್ನು ಮಾಡುವುದರ ಮೂಲಕ ಭಕ್ತಿಯಿಂದ ನಮಿಸುವರು .
ಬೆಳಿಗ್ಗೆ ಗ್ರಾಮದ ಭಕ್ತರು ಹಾಗೂ ಮಹಿಳೆಯರು ಪಾಂಡುರಂಗ ವಿಠ್ಠಲನ ದರ್ಶನ ಪಡೆದು ಪುನಿತರಾದರು.
ಮಧ್ಯಾಹ್ನ ಮಹಾ ಪ್ರಸಾದವನ್ನು ಸ್ವೀಕರಿಸಿದರು .
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಲಾಧಾರಿಗಳಾದ ಶೇಖಪ್ಪ ಪೂಜಾರ,ಹುಚ್ಚೀರಪ್ಪ ಬಾಬರಿ ಬಸಪ್ಪ ಯಲಬುರ್ಗಿ, ಚನ್ನಬಸಪ್ಪ ಕಟಗಿ, ರಾಮಪ್ಪ ಕಂಬಳಿ,ಶ್ರೀಕಾಂತ ಪೂಜಾರ, ರಾಮಪ್ಪ ಯತ್ನಟ್ಟಿ ಯಲ್ಲಪ್ಪ ಜೋಗಿನ ದೇವಪ್ಪ ಗಂಗರಾತ್ರಿ, ಬಸಪ್ಪ ಬಡಿಗೇರ, ಮಲ್ಲಪ್ಪ ಗಂಗರಾತ್ರಿ, ಮಾರುತಿ ಕಟಗಿ ಹಾಗೂ ಇನ್ನೂ ಮುಂತಾದ ಭಕ್ತರು ಪಾಲ್ಗೊಂಡಿದ್ದರು.


Gadi Kannadiga

Leave a Reply