ಬೆಳಗಾವಿ,ಅ.೦೭: ಇದೇ ಅಕ್ಟೋಬರ್ ೧೧ ರಿಂದ ೧೩ರವರೆಗೆ ಶ್ರೀ ಪಂತ ಮಹಾರಾಜ ಬಾಳೇಕುಂದ್ರಿ ಗ್ರಾಮದ ಜಾತ್ರೆಯು ನಡೆಯುತ್ತಿದ್ದು ಜಾತ್ರೆಯ ಮುಖ್ಯ ದಿನ ಅಕ್ಟೋಬರ್ ೧೩ ರಂದು ವಿಶೇಷ ದಿನವಾಗಿದ್ದರ ಹಿನ್ನೆಲೆಯಲ್ಲಿ ಜನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ವಾಹನಗಳನ್ನು ಬೆಳಗಾವಿ ನಗರ ಬಸ್ ನಿಲ್ದಾಣದಿಂದ ಹಾಗೂ ಪಂತ ಬಾಳೇಕುಂದ್ರಿಯಿಂದ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಠಿಯಿಂದ ಸದರಿ ಜಾತ್ರಾ ಅವಧಿಯಲ್ಲಿ ಬೆಳಗಾವಿ ನಗರ ಬಸ್ ನಿಲ್ದಾಣದಲ್ಲಿ ಜಾತ್ರಾ ಬಿಂದು ಸ್ಥಾಪಿಸಿ, ೨ ಜನ ಭದ್ರತಾ ರಕ್ಷಕರನ್ನು, ಶ್ರೀ ಪಂತ ಬಾಳೇಕುಂದ್ರಿಯ ಜಾತ್ರಾ ಬಿಂದುವುನಲ್ಲಿ ೩ ಜನ ಭದ್ರತಾ ರಕ್ಷಕರನ್ನು ನಿಯೋಜಿಸಿ, ವಾಹನಗಳ ಸುಗಮ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾಸಂಸ್ಥೆ, ಬೆಳಗಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಶ್ರೀ ಪಂತ ಮಹಾರಾಜ ಬಾಳೇಕುಂದ್ರಿ ಜಾತ್ರೆಗೆ ವಿಶೇಷ ವಾಹನ ಕಾರ್ಯಾಚರಣೆ