ಯಮಕನಮರಡಿ:-ಯಮಕನಮರಡಿ ಗ್ರಾಮದ ಜೋಡ ಲಕ್ಷ್ಮೀದೇವತೆಯ ಜಾತ್ರಾ ಮಹೋತ್ಸವದಂಗವಾಗಿ ಶುಕ್ರವಾರ ದಿ,೧೦ ದಂದು ಸುತ್ತಲಿನ ಗ್ರಾಮಗಳಾದ ಹತ್ತರಗಿ, ಯಮಕನಮರಡಿ, ಗುಡಗನಟ್ಟಿ, ಚಿಕಾಲಗುಡ್ಡ, ಉ-ಖಾನಾಪೂರ,ಮಣಗುತ್ತಿ, ನರಸಿಂಗಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದ ತಾಯಂದಿರರು ದೇವತೆಯರಿಗೆ ಉಡಿ ತುಂಬಿ ಹರಕೆ ತಿರಿಸಿದರು, ಗ್ರಾಮದ ಶ್ರೀಲಕ್ಷ್ಮೀ ದೇವತೆಯರಿಗೆ ಹಾಗೂ ಶ್ರೀದಮನದೇವತೆಯರಿಗೆ ವಿಶೇಷ ಪೂಜೆ ನೆರವೆರಿಸಿ ಉಡಿ ತುಂಬುವ ಕಾರ್ಯಕ್ರಮ ಮುಂಜಾನೆಯಿಂದ ಶುಕ್ರವಾರ ರಾತ್ರಿಯ ವರೆಗೂ ನಡೆಯಿತು,
ವಿಶೇಷ ವಾಧ್ಯಗಳ ಮೂಲಕ ಬಂದ ಗ್ರಾಮದ ಹಕ್ಕುದಾರರು ದೇವತೆಯ ಉಡಿ ತುಂಬಿ ಪು£ತರಾದರು,
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಈ ಗ್ರಾಮ ದೇವತೆಯರ ವಿಶೇಷ ಜಾತ್ರೆ ನಾಳೆ ದಿ, ೧೧ ರಂದು ಸಂಜೆ ದೇವತೆಯರನ್ನು ಸೀಮೆಗೆ ಬಿಳ್ಕೋಡುವುದರೊಂದಿಗೆ ಕೊನೆಗೊಳ್ಳಲಿದೆ,
Gadi Kannadiga > Local News > ಶ್ರೀಲಕ್ಷ್ಮೀದೇವಿ ಹಾಗೂ ದಮನದೇವತೆಯರಿಗೆ ವಿಶೇಷ ಪೂಜೆ