This is the title of the web page
This is the title of the web page

Please assign a menu to the primary menu location under menu

State

ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ


ಗದಗ ಸೆಪ್ಟೆಂಬರ್ ೧೯: ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ ೦೧ ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಹಿರಿಯ ನಾಗರಿಕರು ತಮ್ಮಲ್ಲಿರುವ ಕ್ರೀಡಾ ಮನೋಭಾವ ಮತ್ತು ಕಲೆಯನ್ನು ತೋರ್ಪಡಿಸಲು ಅನುಕೂಲವಾಗುವಂತೆ, ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ದೆಗಳನ್ನು ಏರ್ಪಡಿಸಲಾಗುತ್ತದೆ.
ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-೧೯ರ ಎರಡು ಡೋಸ್ ಲಸಿಕೆ ಹಾಗೂ ಬುಸ್ಟರ್ ಡೋಸ್ ಪಡೆದ ಗದಗ ಜಿಲ್ಲೆಯ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆಪ್ಟೆಂಬರ್ ೨೨ ರಂದು ನಗರದ ಕೆ. ಹೆಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ ಇಲ್ಲಿ ನಡೆಸಲಾಗುವುದು.
ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಹಿರಿಯ ನಾಗರಿಕರು ತಮ್ಮ ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ವಯಸ್ಸಿನ ಆಧಾರ ಕಾರ್ಡ್ ಹಾಗೂ ಕೋವಿಡ್-೧೯ರ ಎರಡು ಡೋಸ್ ಲಸಿಕೆ ಹಾಗೂ ಬುಸ್ಟರ್ ಡೋಸ್ ಪಡೆದ ದಾಖಲೆಯೊಂದಿಗೆ ವಿಕಲಚೇತನರ ಪುನರ್ವಸತಿ ಕೇಂದ್ರ, ಗದಗ(ಡಿ.ಡಿ.ಆರ್.ಸಿ)-೯೭೪೨೧೮೬೯೦೯, ಶ್ರೀ ಸಿದ್ಧೇಶ್ವರ ವಿಧ್ಯಾಪೀಠ (ರಿ) ತಾಳಿಕೋಟಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಗದಗ-೯೬೦೬೩೫೬೪೩೯ ಹಾಗೂ ಎಲ್ಲ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳು ಇವರಲ್ಲಿ ದಾಖಲೆಗಳ ಝರಾಕ್ಸ ಪ್ರತಿಗಳೊಂದಿಗೆ ಹೆಸರನ್ನು ಸೆಪ್ಟೆಂಬರ್ ೨೧ ರೊಳಗಾಗಿ ಸಾಯಂಕಾಲ ೦೫ ಘಂಟೆಗಳೊಳಗಾಗಿ ನೊಂದಾಯಿಸಬಹುದು ಅಥವಾ ನೇರವಾಗಿ ಸ್ಪರ್ಧೆಗಳು ನಡೆಯುವ ದಿನಾಂಕದಂದು ನೊಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ:೦೮೩೭೨-೨೨೦೪೧೯, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳ ಕಚೇರಿ, ಗದಗ ಇಲ್ಲಿಗೆ ಸಂಪರ್ಕಿಸಬಹುದಾಗಿದೆ.
ಹಿರಿಯ ನಾಗರಿಕರಿಗೆ ಏರ್ಪಡಿಸಲಾಗುವ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿವರ :
ಸೆಪ್ಟೆಂಬರ್ ೨೨ ರಂದು ಬೆ ೯ ಗಂಟೆಗೆ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ೬೦ ರಿಂದ ೬೯ ವರ್ಷ, ೭೦ ರಿಂದ ೭೯ ವರ್ಷ, ೮೦ ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗಾಗಿ ನಡಿಗೆ, ರಿಂಗನ್ನು ಬಕೆಟ್ ನಲ್ಲಿ ಹಾಕುವುದು, ಮ್ಯೂಜಿಕಲ್ ಚೇರ್ ಸ್ಪರ್ಧೆಗಳು ಜರುಗಲಿವೆ.
ಸೆಪ್ಟೆಂಬರ್ ೨೨ ರಂದು ಬೆ ೯ ಗಂಟೆಗೆ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ೬೦ ರಿಂದ ೬೦ ವರ್ಷ, ೭೦ ರಿಂದ ೭೯ ವರ್ಷ, ೮೦ ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗಾಗಿ ಏಕ ಪಾತ್ರಾಭಿನಯ , ಗಾಯನ ಸ್ಪರ್ಧೆ , ಚಿತ್ರಕಲೆ ಸ್ಪರ್ಧೆಗಳು ಜರುಗಲಿವೆ.
ಸಾಂಸ್ಕೃತಿಕ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕಡ್ಡಾಯವಾಗಿ ಬಣ್ಣಗಳನ್ನು ( ಬಣ್ಣದ ಬಾಕ್ಸ್ ) ತಾವೇ ತರಬೇಕು.


Gadi Kannadiga

Leave a Reply