ಯಮಕನಮರಡಿ-ಸಮೀಪದ ಬಸ್ಸಾಪೂರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಜರುಗಿದವು.ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೌಢ ಶಾಲೆಯ ಸಹಶಿಕ್ಷಕರಾದ ಶ್ರೀ ಎಂ.ಬಿ.ದೇಶಪಾಂಡೆ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಾನಸಿಕವಾಗಿ ಹಾಗೂ ಧೈಹಿಕವಾಗಿ ಸದೃಢವಾಗಿರಲು ತುಂಬಾ ಅವಶ್ಯಕ,ಎಲ್ಲಾ ವಿದ್ಯಾರ್ಥಿಗಳು ಮುಕ್ತ ಮನಸ್ಸಿ£ಂದ ಭಾಗವಹಿಸಿ ಕ್ರೀಡಾಕೂಟಗಳನ್ನು ಯಶಸ್ವಿಗೊಳಿಸುವಂತೆ ಕರೆ £Ãಡಿದರು.ನಂತರ ದೈಹಿಕ ಶಿಕ್ಷಕರಾದ ಶ್ರೀ ಬಿ. ಬಿ. ಮುಸಲ್ಮಾರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಬಸಾಪೂರ ಪ್ರೌಢ ಶಾಲಾ ಮುಖ್ಯಾಧ್ಯಾಪಕರು,ಸಹಶಿಕ್ಷಕರು,ಬಸಾಪೂರ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಪ್ರಧಾನ ಗುರುಗಳು,ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಾರಂಭದಲ್ಲಿ ಸಿ ಆರ್ ಪಿ ಶ್ರೀ ಎಸ್.ಐ. ಗುಂಡಗಿ ಸ್ವಾಗತಿಸಿದರು,ಶಿಕ್ಷಕ ಸಂಘದ ಶ್ರೀ ರಾಜು ತಳವಾರ £ರೂಪಿಸಿ ಕೊನೆಯಲ್ಲಿ ವಂದಿಸಿದರು
Gadi Kannadiga > Local News > ವಿದ್ಯಾರ್ಥಿಗಳು ಸದೃಢವಾಗಿರಲು ಕ್ರೀಡೆಗಳು ಅವಶ್ಯಕ:ದೇಶಪಾಂಡೆ